ಇಸ್ರೇಲ್‌ ದಾಳಿಗೆ ಅಲ್‌ ಜಝೀರಾದ ಪ್ರಸಾರ ಇಂಜಿನಿಯರ್‌ ಕುಟುಂಬದ 19 ಮಂದಿ ಬಲಿ

Update: 2023-11-01 06:52 GMT

Photo: PTI

ಗಾಝಾ: ಗಾಝಾದ ಅತ್ಯಂತ ದೊಡ್ಡ ನಿರಾಶ್ರಿತರ ಶಿಬಿರವಾದ ಜಬಲಿಯಾ ಕ್ಯಾಂಪ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿ ವೇಳೆ ಅಲ್‌ ಜಝೀರಾ ಸುದ್ದಿ ಸಂಸ್ಥೆಯ ಪ್ರಸಾರ ಇಂಜಿನಿಯರ್‌ ಒಬ್ಬರ 19 ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ದಾಳಿಯಲ್ಲಿ ಅಲ್‌ ಜಝೀರಾದ ಗಾಝಾ ಬ್ಯುರೋದಲ್ಲಿ ಕಾರ್ಯನಿರ್ವಹಿಸುವ ಮುಹಮ್ಮದ್‌ ಅಬು ಅಲ್-ಖುಮ್ಸಾನ್‌ ಅವರು ತಮ್ಮ ತಂದೆ, ಸಹೋದರ, ಇಬ್ಬರು ಸಹೋದರಿಯರು, ಎಂಟು ಸೋದರಳಿಯಂದಿರು ಮತ್ತು ಸೋದರ ಸೊಸೆಯರ ಸಹಿತ ಹಲವು ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ.

ಅಲ್‌ ಜಝೀರಾ ಈ ದಾಳಿಯನ್ನು ಖಂಡಿಸಿ ಇದು ಇಸ್ರೇಲಿ ಪಡೆಗಳು ನಡೆಸಿದ ನರಮೇಧ ಎಂದು ಬಣ್ಣಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ಅಲ್‌ ಜಝೀರಾದ ವರದಿಗಾರರೊಬ್ಬರು ಇಸ್ರೇಲಿ ವಾಯು ದಾಳಿಗೆ ತಮ್ಮ ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಗನನ್ನು ಕಳೆದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News