ಅಮೆರಿಕ: 4 ಭಾರತೀಯ ಅಮೆರಿಕನ್ ಮಕ್ಕಳು ನಾಪತ್ತೆ

Update: 2024-02-09 16:48 GMT

PHOTO : X@WIMissingPerson

ವಾಷಿಂಗ್ಟನ್ : ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಗ್ರೀನ್ಬೇ ನಗರದಲ್ಲಿ 4 ಭಾರತೀಯ ಅಮೆರಿಕನ್ ಮಕ್ಕಳು ನಾಪತ್ತೆಯಾಗಿದ್ದು ಇವರನ್ನು ಅಪಹರಣ ಮಾಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ನಾಪತ್ತೆಯಾದ ಮಕ್ಕಳನ್ನು 4 ವರ್ಷದ ಟ್ರುವಾರ್ಡ್, 1 ವರ್ಷದ ಜರ್ನೀ ಹಾಗ್ರ್ರೋವ್, 6 ವರ್ಷದ ಜಡಾ ಹಾಗ್ರ್ರೋವ್ ಮತ್ತು 7 ವರ್ಷದ ಜೆನಿಸೀ ಹಾಗ್ರ್ರೋವ್ ಎಂದು ಗುರುತಿಸಲಾಗಿದೆ. ಅಲಾಸ್ಕ ನಿವಾಸಿಗಳಾದ ಡಿಯೆನ್ನಾ ವಾರ್ಡ್ ಮತ್ತು ಡಯಾನಾ ಹಲ್ಫಾಡೆ ಮಕ್ಕಳನ್ನು ಅಪಹರಿಸಿರುವ ಶಂಕೆಯಿದ್ದು ಅವರ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ಈ ಆರೋಪಿಗಳು ಕಡೆಯ ಬಾರಿಗೆ ಸೈಂಟ್ ವಿನ್ಸೆಂಟ್ ಆಸ್ಪತ್ರೆಯ ಸುತ್ತಮುತ್ತ ಕಂಡುಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News