ಹೌದಿಗಳ 5 ಕ್ಷಿಪಣಿ ದಾಳಿ ಹಿಮ್ಮೆಟ್ಟಿಸಿದ ಅಮೆರಿಕ

Update: 2024-02-05 16:30 GMT

Photo: AFP

ವಾಷಿಂಗ್ಟನ್ : ಯೆಮನ್ ಬಳಿ ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಹಡಗುಗಳನ್ನು ಗುರಿಯಾಗಿಸಿದ 5 ಕ್ಷಿಪಣಿಗಳನ್ನು ಅಮೆರಿಕ ಪಡೆ ತುಂಡರಿಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಯೆಮನ್‍ನಲ್ಲಿ ಇರಾನ್ ಬೆಂಬಲಿತ ಹೌದಿಗಳ ವಿರುದ್ಧ ಅಮೆರಿಕ ಮತ್ತು ಬ್ರಿಟನ್ ಪಡೆಗಳು ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. `ಹೌದಿಗಳ ವಿರುದ್ಧ ಸ್ವರಕ್ಷಣೆಯ ದಾಳಿ ನಡೆಸಿವೆ. ಭೂಮಿಯ ಮೇಲಿನ ಗುರಿಯನ್ನು ಉದ್ದೇಶಿಸಿದ ಕ್ರೂಸ್ ಕ್ಷಿಪಣಿಗಳು ಹಾಗೂ ಕೆಂಪು ಸಮುದ್ರದಲ್ಲಿ ಸಾಗುವ ನೌಕೆಗಳನ್ನು ಗುರಿಯಾಗಿಸಿದ 4 ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲು ಯೆಮನ್‍ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಸಿದ್ಧತೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಅಮೆರಿಕದ ಪಡೆ ಈ ಕ್ಷಿಪಣಿಗಳನ್ನು ಧ್ವಂಸಗೊಳಿಸಿದೆ. ಕೆಂಪು ಸಮುದ್ರದಲ್ಲಿರುವ ಅಮೆರಿಕ ನೌಕಾಪಡೆಯ ಹಡಗುಗಳು ಹಾಗೂ ಈ ವಲಯದಲ್ಲಿ ಪ್ರಯಾಣಿಸುವ ವಾಣಿಜ್ಯ ಹಡಗುಗಳಿಗೆ ಇವು ಬೆದರಿಕೆ ಒಡ್ಡಿದ್ದವು' ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.

ಗಾಝಾ ಸಂಘರ್ಷ ಉಲ್ಬಣಿಸಿದ ಬಳಿಕ ಕೆಂಪು ಸಮುದ್ರದಲ್ಲಿ ಸಾಗುವ ಸರಕು ನೌಕೆಗಳ ಮೇಲೆ ಯೆಮನ್ ಮೂಲದ ಹೌದಿಗಳು ದಾಳಿ ನಡೆಸುತ್ತಿದ್ದು ಫೆಲೆಸ್ತೀನೀಯರನ್ನು ಬೆಂಬಲಿಸಿ ಈ ದಾಳಿ ನಡೆಸುತ್ತಿರುವುದಾಗಿ ಹೌದಿಗಳು ಹೇಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News