ಟರ್ಕಿಯ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ | 12 ಮಂದಿಗೆ ಗಾಯ

Update: 2024-11-05 16:38 GMT

ಸಾಂದರ್ಭಿಕ ಚಿತ್ರ

ಅಂಕಾರ : ಮಂಗಳವಾರ ವಾಯವ್ಯ ಟರ್ಕಿಯ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಸಿಬ್ಬಂದಿಗಳು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕೊಕೇಲಿ ಪ್ರಾಂತದ ಇಜ್ಮಿತ್ನಲ್ಲಿರುವ ತೈಲ ಸಂಸ್ಕರಣಾಗಾರದಲ್ಲಿ ನಿರ್ವಹಣೆ ಕಾಮಗಾರಿಯ ಸಂದರ್ಭ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅಗ್ನಿಶಾಮಕ ದಳದ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಗಾಯಗೊಂಡ ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News