ಅಮೆರಿಕ | ದರೋಡೆ ಸಂದರ್ಭ ಶಂಕಿತ ಬಾಲಾಪರಾಧಿಯಿಂದ ಭಾರತೀಯನ ಗುಂಡಿಕ್ಕಿ ಹತ್ಯೆ

Update: 2024-08-17 16:29 GMT

ಸಾಂದರ್ಭಿಕ ಚಿತ್ರ

ವಾಶಿಂಗ್ಟನ್ : ಉತ್ತರ ಕರೋಲಿನಾದ ಸ್ಯಾಲಿಸ್‌ಬರಿ ನಗರದ ಅಂಗಡಿ ಮಳಿಗೆಯೊಂದರಲ್ಲಿ ಶಂಕಿತ ಬಾಲ ಅಪರಾಧಿಯೊಬ್ಬನು ದರೋಡೆ ನಡೆಸಿದ ಸಂದರ್ಭ ಅದರ ಮಾಲಕ, 36 ವರ್ಷ ವಯಸ್ಸಿನ ಭಾರತೀಯ ಮೂಲದ ಮೈನಾಂಕ್ ಪಟೇಲ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ. ವಾಶಿಂಗ್ಟನ್‌ ನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟೊಬಾಕೊ ಹೌಸ್‌ನಲ್ಲಿರುವ ಪಟೇಲ್ ಮಳಿಗೆಯಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಶ್ವೇತಜನಾಂಗೀಯ ಬಾಲಾಪರಾಧಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಕೊಲೆ ಕೃತ್ಯದಹಿಂದಿನ ಉದ್ದೇಶ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ, ಇದೊಂದು ದರೋಡೆ ಪ್ರಕರಣವಾಗಿರುವ ಸಾಧ್ಯತೆಯಿದೆಯೆಂದು ಕ್ಯಾಪ್ಟನ್ ಮ್ಯಾಕ್‌ ಡೇನಿಯರ್ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಇತರ ಯಾರೂ ಕೂಡಾ ಗಾಯಗೊಂಡಿಲ್ಲವೆಂದು ತಿಳಿದುಬಂದಿದೆ.

ಸ್ಥಳೀಯ ನಿವಾಸಿಗಳಿಂದ ಮೈಕ್ ಎಂದೇ ಜನಪ್ರಿಯರಾಗಿದ್ದ ಪಟೇಲ್ ಅವರು ತನ್ನ ಏಳು ತಿಂಗಳ ಗರ್ಭಿಣಿ ಪತ್ನಿ ಹಾಗೂ 5 ವರ್ಷದ ಪುತ್ರಿಯನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News