ಪಾಕಿಸ್ತಾನ ಐಎಸ್‍ಐ ಮುಖ್ಯಸ್ಥರಾಗಿ ಆಸಿಮ್ ಮಲಿಕ್ ನೇಮಕ

Update: 2024-09-23 16:13 GMT
ಲೆ|ಜ| ಆಸಿಮ್ ಮಲಿಕ್‍ | PC : X/@MalikAliiRaza

ಇಸ್ಲಾಮಾಬಾದ್ : ಪಾಕಿಸ್ತಾನದ ಗುಪ್ತಚರ ಇಲಾಖೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್(ಐಎಸ್‍ಐ)ನ ನೂತನ ಮಹಾ ನಿರ್ದೇಕರಾಗಿ ಲೆ|ಜ| ಆಸಿಮ್ ಮಲಿಕ್‍ರನ್ನು ನೇಮಿಸಿರುವುದಾಗಿ ವರದಿಯಾಗಿದೆ.

ಪ್ರಸ್ತುತ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ ಉನ್ನತ ಅಧಿಕಾರಿಯಾಗಿರುವ ಮಲಿಕ್ ಅವರು ಹಾಲಿ ಮಹಾ ನಿದೇಶಕ ಲೆ|ಜ| ನದೀಮ್ ಅಂಜುಮ್ ಅವರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಐಎಸ್‍ಐ ಮುಖ್ಯಸ್ಥರನ್ನು ಪ್ರಧಾನ ಮಂತ್ರಿ ನೇಮಿಸುತ್ತಾರೆ. ಆದರೆ ಸಂಪ್ರದಾಯದಂತೆ ಅವರು ಸೇನಾ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಈ ಅಧಿಕಾರವನ್ನು ಕಾರ್ಯಗತಗೊಳಿಸುತ್ತಾರೆ. ಮಲಿಕ್ ಈ ಹಿಂದೆ ಬಲೂಚಿಸ್ತಾನದಲ್ಲಿ ಪದಾತಿ ದಳ ಮತ್ತು ವಝೀರಿಸ್ತಾನದಲ್ಲಿ ಪದಾತಿ ದಳದ ಮುಖ್ಯಸ್ಥರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News