ಗೋಲ್ಡನ್ ವೀಸಾ ಯೋಜನೆ ಸ್ಥಗಿತಗೊಳಿಸಿದ ಆಸ್ಟ್ರೇಲಿಯಾ

Australia has suspended the Golden Visa scheme

Update: 2024-01-22 16:16 GMT

ಸಾಂದರ್ಭಿಕ ಚಿತ್ರ | Photo: NDTV

ಸಿಡ್ನಿ: ವಿದೇಶಿ ವ್ಯಾಪಾರವನ್ನು ಆಕರ್ಷಿಸಲು ವಿನ್ಯಾಸಗೊಳಿಸಿರುವ, ಶ್ರೀಮಂತ ಸಾಗರೋತ್ತರ ಹೂಡಿಕೆದಾರರಿಗೆ ದೇಶದಲ್ಲಿ ವಾಸಿಸುವ ಸವಲತ್ತನ್ನು ಒದಗಿಸುವ `ಗೋಲ್ಡನ್ ವೀಸಾ' ಯೋಜನೆಯನ್ನು ಆಸ್ಟ್ರೇಲಿಯಾ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ.

`ಗೋಲ್ಡನ್ ವೀಸಾ' ಎಂದೇ ಹೆಸರಾದ `ಸಿಗ್ನಿಫಿಕೆಂಟ್ ಇನ್ವೆಸ್ಟರ್ ವೀಸಾ'(ಎಸ್‍ಐವಿ)ವನ್ನು 2012ರಲ್ಲಿ ಜೂಲಿಯಾ ಗಿಲಾರ್ಡ್ ಸರಕಾರ ಅನುಷ್ಠಾನಗೊಳಿಸಿತ್ತು. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವರದಿಯ ಹಿನ್ನೆಲೆಯಲ್ಲಿ ಈ ವಿಶಿಷ್ಟ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವೆ ಕ್ಲ್ಯಾರಾ ಒ'ನೀಲ್ ಹೇಳಿದ್ದಾರೆ.

ಹೂಡಿಕೆ ವಲಸೆಯ ಮೂಲಕ ಆಸ್ಟ್ರೇಲಿಯಾದಲ್ಲಿ ಕಾಯಂ ನಿವಾಸಿಗಳ ಸ್ಥಾನಮಾನ ಪಡೆಯಲು ಶ್ರೀಮಂತ ಹೂಡಿಕೆದಾರರಿಗೆ ಗೋಲ್ಡನ್ ವೀಸಾ ಅನುವು ಮಾಡಿಕೊಟ್ಟಿದೆ. ಆಸ್ಟ್ರೇಲಿಯಾದಲ್ಲಿ ಕನಿಷ್ಟ 5 ದಶಲಕ್ಷ ಡಾಲರ್ ಹೂಡಿಕೆ ಮಾಡಿದರೆ ಪ್ರತಿಯಾಗಿ ಕಾಯಂ ನಿವಾಸಿಗಳ ಸ್ಥಾನಮಾನ ನೀಡಲಾಗುತ್ತಿತ್ತು. 2012ರಿಂದ ಸಾವಿರಾರು ಗೋಲ್ಡನ್ ವೀಸಾಗಳನ್ನು ಮಂಜೂರು ಮಾಡಲಾಗಿದ್ದು ಇದರಲ್ಲಿ 85%ದಷ್ಟು ವೀಸಾಗಳನ್ನು ಚೀನಾದ ಹೂಡಿಕೆದಾರರು ಪಡೆದಿದ್ದಾರೆ. ಆದರೆ ಈ ಪ್ರಕ್ರಿಯೆಯಿಂದ ನಿರೀಕ್ಷಿತ ಆರ್ಥಿಕ ಪ್ರಯೋಜನ ಲಭಿಸಿಲ್ಲ ಮತ್ತು ಇದನ್ನು ಅಕ್ರಮ ಹಣವನ್ನು ವಿನಿಯೋಗಿಸಲು ಬಳಸುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಗೋಲ್ಡನ್ ವೀಸಾ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರಕಾರದ ಮೂಲಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News