ವಲಸಿಗರ ಸಂಖ್ಯೆ ಕಡಿತಕ್ಕೆ ಕ್ರಮ, ವೀಸಾ ನಿಯಮ ಬಿಗಿ: ಆಸ್ಟ್ರೇಲಿಯ ನಿರ್ಧಾರ

Update: 2023-12-12 18:04 GMT

ಸಾಂದರ್ಭಿಕ ಚಿತ್ರ | Photo: PTI

ಸಿಡ್ನಿ: ಮುಂದಿನ ಎರಡು ವರ್ಷಗಳೊಳಗೆ ವಲಸಿಗರ ಸಂಖ್ಯೆಯನ್ನು ಹಂತಹಂತವಾಗಿ ಕಡಿಮೆಗೊಳಿಸುವ ಯೋಜನೆಯ ಭಾಗವಾಗಿ ಆಸ್ಟ್ರೇಲಿಯವು ವೀಸಾ ನಿಯಮಗಳನ್ನು ಕಠಿಣಗೊಳಿಸಲು ನಿರ್ಧರಿಸಿದೆ. ಅಂತರ್‌ ರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ಕಡಿಮೆ ಪರಿಣತಿಯಿರುವ ಕಾರ್ಮಿಕರಿಗಾಗಿನ ವೀಸಾ ನಿಯಮಗಳನ್ನು ಕಠಿಣಗೊಳಿಸಲಾಗುವುದೆಂದು ಆಸ್ಟ್ರೇಲಿಯ ತಿಳಿಸಿದೆ.

ನೂತನ ವೀಸಾ ನಿಯಮಗಳ ಪ್ರಕಾರ ಅಂತರ್‌ ರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಪರೀಕ್ಷೆಗಳಲ್ಲಿ ಉನ್ನತ ಮಟ್ಟದ ರೇಟಿಂಗ್ನ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯದಲ್ಲಿ ವಾಸ್ತವ್ಯವನ್ನು ಮುಂದುವರಿಸಲು ಅನುಮತಿ ನೀಡುವ ಕ್ರಮಗಳನ್ನು ಕೊನೆಗೊಳಿಸಲಾಗುವುದೆಂದು ವರದಿಗಳು ಹೇಳಿವೆ.

2022-23ರ ಅವಧಿಯಲ್ಲಿ ದೇಶಕ್ಕೆ ಆಗಮಿಸಿರುವ ವಲಸಿಗರ ಸಂಖ್ಯೆ 5.10 ಲಕ್ಷಕ್ಕೇರಿರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಈ ತೀರ್ಮಾನವನ್ನು ಕೈಗೊಂಡಿದೆ. 2024-25 ಹಾಗೂ 2025-26ರಲ್ಲಿ ಈ ಸಂಖ್ಯೆಯಲ್ಲಿ 2.50 ಲಕ್ಷಕ್ಕೆ ಇಳಿಸುವ ಉದ್ದೇಶವನ್ನು ಆಸ್ಟ್ರೇಲಿಯ ಹೊಂದಿದೆ.

ದೇಶದಲ್ಲಿ ವಲಸಿಗರ ಸಂಖ್ಯೆ ಹೆಚ್ಚಲು ವಿದೇಶಿ ವಿದ್ಯಾರ್ಥಿಗಳೇ ಪ್ರಮುಖ ಕಾರಣವೆಂದು ಆಸ್ಟ್ರೇಲಿಯ ಸರಕಾರದ ಅಧಿಕೃತ ಮೂಲಗಳು ತಿಳಿಸಿವೆ. ಕೋವಿಡ್19 ಸಾಂಕ್ರಾಮಿಕ ಹಾವಳಿಯ ಸಂದರ್ಭ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಪರಿಣತಿಯಿರುವ ಉದ್ಯೋಗಿಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಾಡಲು ಇನ್ನಷ್ಟು ಶ್ರಮಿಸಲಾಗುವುದು ಎಂದು ಆಸ್ಟ್ರೇಲಿಯ ಸರಕಾರದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News