ಮನೆಗೆ ಮರಳುವ ಸಿರಿಯಾ ನಿರಾಶ್ರಿತರಿಗೆ ಆರ್ಥಿಕ ನೆರವು ಘೋಷಿಸಿದ ಆಸ್ಟ್ರಿಯಾ
Update: 2024-12-13 16:15 GMT
ವಿಯೆನ್ನಾ : ತಮ್ಮ ಮನೆಗೆ ಮರಳಲು ಸಿರಿಯಾ ನಿರಾಶ್ರಿತರಿಗೆ 1000 ಯುರೋ (ಸುಮಾರು 1,050 ಡಾಲರ್) ಮೊತ್ತವನ್ನು ನೀಡುವುದಾಗಿ ಆಸ್ಟ್ರಿಯಾ ಸರಕಾರ ಶುಕ್ರವಾರ ಘೋಷಿಸಿದೆ.
ಸಿರಿಯಾದಲ್ಲಿ ಬಶರ್ ಅಸ್ಸಾದ್ ಸರಕಾರ ಪತನಗೊಂಡ ಬಳಿಕ ಆಸ್ಟ್ರಿಯಾದಲ್ಲಿ ಆಶ್ರಯ ಕೋರಿ ಸಿರಿಯಾ ನಿರಾಶ್ರಿತರು ಸಲ್ಲಿಸಿದ್ದ ಅರ್ಜಿಗಳ ಪರಿಶೀಲನೆಯನ್ನು ಸ್ಥಗಿತಗೊಳಿಸಲಾಗಿದೆ. ಸಿರಿಯಾದ ಪರಿಸ್ಥಿತಿ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದು ಸ್ಪಷ್ಟವಾದ ಬಳಿಕ ಸಿರಿಯಾ ನಿರಾಶ್ರಿತರನ್ನು ಗಡೀಪಾರು ಮಾಡುವ ಬಗ್ಗೆ ನಿರ್ಧರಿಸಲಾಗುವುದು. ಅದುವರೆಗೆ ಸ್ವದೇಶಕ್ಕೆ ಹಿಂತಿರುಗಲು ಒಪ್ಪುವ ನಿರಾಶ್ರಿತರಿಗೆ ನಗದು ನೆರವು ನೀಡಲಾಗುತ್ತದೆ ಎಂದು ಸರಕಾರ ಹೇಳಿದೆ.