ತಾಂತ್ರಿಕ ದೋಷದಿಂದ ಗ್ರಾಹಕರಿಗೆ ಹೆಚ್ಚುವರಿ ಮೊತ್ತ ಪಾವತಿಸಿದ ಬ್ಯಾಂಕ್
Update: 2023-08-16 18:40 GMT
ಡಬ್ಲಿನ್ : ಬ್ಯಾಂಕ್ ಆಫ್ ಐರ್ಲ್ಯಾಂಡ್ ನ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಮಂಗಳವಾರ ಬ್ಯಾಂಕಿನ ಎಟಿಎಂ ಕೇಂದ್ರಗಳ ಮೂಲಕ ಹಣ ಹಿಂಪಡೆದ ಗ್ರಾಹಕರಿಗೆ ಅವರು ಸೂಚಿಸಿದ್ದಕ್ಕಿಂತ ಹೆಚ್ಚಿನ ಹಣ ದೊರಕಿದೆ.
ಈ ಸುದ್ದಿ ಸಾಮಾಜಿಕ ಮಾಧ್ಯಮದ ಮೂಲಕ ಕ್ಷಣಾರ್ಧದಲ್ಲಿ ಹರಡಿದ ಬಳಿಕ ಎಟಿಎಂ ಕೇಂದ್ರಗಳ ಎದುರು ಮಾರುದ್ದದ ಸರತಿ ಸಾಲು ಬೆಳೆದಿದ್ದು ಮಧ್ಯರಾತ್ರಿವರೆಗೂ ಗ್ರಾಹಕರು ಎಟಿಎಂ ಕೇಂದ್ರಕ್ಕೆ ಮುಗಿಬಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ. ಬಳಿಕ ಈ ತಾಂತ್ರಿಕ ದೋಷವನ್ನು ಪತ್ತೆಹಚ್ಚಿ ಸರಿಪಡಿಸಲಾಗಿದ್ದು ಹೆಚ್ಚುವರಿ ಹಣ ಪಡೆದ ಗ್ರಾಹಕರ ಖಾತೆಯಿಂದ ಆ ಹಣವನ್ನು ಕಡಿತಗೊಳಿಸಲಾಗುವುದು ಎಂದು ಬ್ಯಾಂಕ್ ನ ಅಧಿಕಾರಿ ಹೇಳಿದ್ದಾರೆ.