ಬೆನಿನ್ : ಪೆಟ್ರೋಲ್ ಸಂಗ್ರಹಾಗಾರದಲ್ಲಿ ಅಗ್ನಿ ದುರಂತ , 35 ಮಂದಿ ಸಜೀವ ದಹನ

Update: 2023-09-24 18:16 GMT

ಸಾಂದರ್ಭಿಕ ಚಿತ್ರ

ಪೋರ್ಟೋ ನೊವೊ: ಆಫ್ರಿಕನ್ ರಾಷ್ಟ್ರವಾದ ಬೆನಿನ್‌ನ ಗಡಿಭಾಗದ ಪಟ್ಟಣವೊಂದರಲ್ಲಿ ಪೆಟ್ರೋಲ್ ಸಂಗ್ರಹಾಗಾರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 35 ಮಂದಿ ಜೀವಂತದಹನ ಹಾಗೂ 10ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದಾರೆ.

ನೈಜೀರಿಯ ಸಮೀಪದ ಗಡಿಪಟ್ಟಣವಾದ ಸೆಮಿ-ಪೊಡ್ಜ್‌ನಲ್ಲಿ ಪೆಟ್ರೋಲ್ ತುಂಬಿದ ಬ್ಯಾಗ್‌ಗಳನ್ನು ಸಂಗ್ರಹಾಗಾರಕ್ಕೆ ಸಾಗಿಸಲು ವಾಹನದಿಂದ ಅನ್‌ಲೋಡ್ ಮಾಡುತ್ತಿದ್ದಾಗ ಅಗ್ನಿ ಅನಾಹುತ ಸಂಭವಿಸಿದೆಯೆಂದು ಬೆನಿನ್‌ನ ಗೃಹ ಹಾಗೂ ಸಾರ್ವಜನಿಕ ಸುರಕ್ಷತಾ ಸಚಿವಾಲಯ ತಿಳಿಸಿದೆ.

ಇಡೀ ಪ್ರದೇಶದಲ್ಲಿ ಬೆಂಕಿ ಹರಡಿದ್ದು, ಒಂದು ಮಗು ಸೇರಿದಂತೆ 35 ಮಂದಿ ಸಾವನ್ನಪ್ಪಿದ್ದಾರೆ. 12ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿ ಅನಾಹುತದಲ್ಲಿ ಅಪಾರ ಸೊತ್ತುಗಳಿಗೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

ಅಗ್ನಿಶಾಮಕದಳ, ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸುತ್ತಿವೆ. ಅಗ್ನಿ ಅವಘಡಕ್ಕೆ ಕಾರಣವನ್ನು ಪತ್ತೆಹಚ್ಚಲು ಸಾರ್ವಜನಿಕ ಅಭಿಯೋಜಕರ ಕಾರ್ಯಾಲಯವು ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News