ಬಾಂಬ್ ಸ್ಫೋಟ; 4 ಮಕ್ಕಳ ಸಹಿತ ಒಂದೇ ಕುಟುಂಬದ 8 ಮಂದಿ ಮೃತ್ಯು

Update: 2023-09-27 18:34 GMT

ಸಾಂದರ್ಭಿಕ ಚಿತ್ರ

ಕರಾಚಿ, ಸೆ.27: ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ರಾಕೆಟ್ ನಲ್ಲಿ ಬಳಸುವ ಬಾಂಬ್ ಸ್ಫೋಟಿಸಿ 4 ಮಕ್ಕಳ ಸಹಿತ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆಂದು ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಅಲ್ಲಿ ಅವರಿಗೆ ಬಾಂಬ್ ಸಿಕ್ಕಿದೆ. ಅದನ್ನು ಮನೆಗೆ ತಂದಾಗ ಸ್ಫೋಟಗೊಂಡಿದ್ದು ನಾಲ್ಕು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ರೋಹಿತ್ ಖೋಸ ಹೇಳಿದ್ದಾರೆ.

ಸಿಂಧ್ ಪ್ರಾಂತದ ಕಶ್ಮೋರ್ ಜಿಲ್ಲೆಯ ಕಂದ್ಕೋಟ್ ತಾಲೂಕಿನ ಗೋಥ್ ಗ್ರಾಮದಲ್ಲಿ ಡಕಾಯಿತರ ಚಟುವಟಿಕೆ ಹೆಚ್ಚಿದ್ದು ಈ ಬಾಂಬ್ ಡಕಾಯಿತರ ತಂಡಕ್ಕೆ ಸೇರಿರಬಹುದು ಎಂಬ ಶಂಕೆಯಿದೆ. ಅಲ್ಲದೆ  ಈ ಪ್ರದೇಶದಲ್ಲಿ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವ ಸಾಧ್ಯತೆಯಿರುವುದರಿಂದ ಪೊಲೀಸ್ ತಂಡವನ್ನು ಸ್ಥಳಕ್ಕೆ ರವಾನಿಸಿ ಶೋಧ ಕಾರ್ಯಕ್ಕೆ ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News