ಬ್ರಿಟನ್: ಹಂದಿ ಜ್ವರವನ್ನು ಹೋಲುವ ಜ್ವರದ ವೈರಸ್ ಮಾನವನಲ್ಲಿ ಪತ್ತೆ
Update: 2023-11-27 17:16 GMT
ಲಂಡನ್: ಹಂದಿಗಳಲ್ಲಿ ಈಗ ಪರಿಚಲನೆಯಲ್ಲಿರುವ ಎ(ಎಚ್1ಎನ್2)ವಿ ವೈರಸ್ ಸೋಂಕನ್ನು ಹೋಲುವ ಮೊದಲ ಮಾನವ ಪ್ರಕರಣವನ್ನು ಪತ್ತೆಹಚ್ಚಿರುವುದಾಗಿ ಬ್ರಿಟನ್ ಹೇಳಿದೆ.
ದೈನಂದಿನ ರಾಷ್ಟ್ರೀಯ ಜ್ವರ ಕಣ್ಗಾವಲು ಪ್ರಕ್ರಿಯೆಯ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂಬಂಧಪಟ್ಟ ವ್ಯಕ್ತಿಯು ಸೌಮ್ಯವಾದ ಅನಾರೋಗ್ಯಕ್ಕೆ ಒಳಗಾಗಿದ್ದು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಬ್ರಿಟನ್ ಆರೋಗ್ಯ ಇಲಾಖೆ ಹೇಳಿದೆ. ಸೋಂಕಿನ ಮೂಲ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರಕರಣದ ನಿಕಟ ಸಂಪರ್ಕಗಳನ್ನು ಆರೋಗ್ಯ ಅಧಿಕಾರಿಗಳು ಅನುಸರಿಸುತ್ತಿದ್ದಾರೆ. ಉತ್ತರ ಯಾರ್ಕ್ಷೈರ್ನ ಆಸ್ಪತ್ರೆಗಳಲ್ಲಿ ಹೆಚ್ಚಿನ ಕಣ್ಗಾವಲಿನೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.