ಮಾದಕವಸ್ತು ಸೇವನೆ ಕೊಠಡಿ ಆರಂಭಿಸಲು ಬ್ರಿಟನ್ ನಿರ್ಧಾರ

Update: 2023-09-27 18:13 GMT

Photo : PTI

ಲಂಡನ್, ಸೆ.27: ಬ್ರಿಟನ್ ನಲ್ಲಿ ಮೊತ್ತಮೊದಲ ಅಧಿಕೃತ ಮಾದಕವಸ್ತು ಸೇವನೆ ಕೊಠಡಿ ಆರಂಭಿಸುವ ಪ್ರಸ್ತಾವನೆಗೆ ಬುಧವಾರ ಅನುಮೋದನೆ ದೊರಕಿದ್ದು ಸ್ಕಾಟ್ಲ್ಯಾಂಡ್ನಲ್ಲಿ ಇದು ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

ಮಾದಕ ವಸ್ತು ವ್ಯಸನಿಗಳಿಗೆ ಆಗುವ ಹಾನಿಯನ್ನು ಕಡಿಮೆಗೊಳಿಸುವ ಈ ವಿವಾದಾತ್ಮಕ ಯೋಜನೆಯ ಕುರಿತು ಹಲವು ವರ್ಷಗಳಿಂದ ಪರ-ವಿರುದ್ಧ ಚರ್ಚೆಯ ಬಳಿಕ ಬುಧವಾರ ಅನುಮೋದನೆ ದೊರಕಿದೆ.

ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋದಲ್ಲಿ 2.8 ದಶಲಕ್ಷ ಪೌಂಡ್ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ವಿಶೇಷ ಕೊಠಡಿಯು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ, ಸ್ವಚ್ಛ ಪರಿಸರದಲ್ಲಿ ತಮ್ಮದೇ ಆದ ಮಾದಕವಸ್ತುಗಳನ್ನು ಬಳಸಲು ಅನುಕೂಲ ಒದಗಿಸುತ್ತದೆ. ಇಂತಹ ವ್ಯವಸ್ಥೆಯು ಮಾದಕವ್ಯಸನಿಗಳ ಆರೋಗ್ಯ ಸುಧಾರಿಸಲು ನೆರವಾಗುವ ಜತೆಗೆ ಅವರು ಚೇತರಿಸಿಕೊಳ್ಳಲೂ ಉಪಯುಕ್ತವಾಗಿದೆ ಎಂಬುದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ನಿದರ್ಶನಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News