ನಿಜ್ಜಾರ್ ಹತ್ಯೆಯೊಂದಿಗೆ ಸೃಷ್ಟಿಯಾದ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ: ಜಸ್ಟಿನ್ ಟ್ರೂಡೊ
Update: 2024-05-02 17:02 GMT
ಟೊರಂಟೊ: ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧ ಸುಧಾರಿಸಬಹುದು. ಆದರೆ ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ನ ಹತ್ಯೆಯೊಂದಿಗೆ ಸೃಷ್ಟಿಯಾದ ಸಮಸ್ಯೆಯನ್ನು ಕೆನಡಾ ನಿರ್ಲಕ್ಷಿಸುವಂತಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.
ವಿಶ್ವದ ಎರಡು ಅತೀ ದೊಡ್ಡ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಕೆನಡಾಗಳು ಜತೆಗೇ ಸಾಗಬೇಕಿದೆ. ಆದರೆ ನಿಜ್ಜಾರ್ ಹತ್ಯೆ ಪ್ರಕರಣ ನಮ್ಮ ಸಂಬಂಧಕ್ಕೆ ಸಮಸ್ಯೆಯಾಗಿದೆ, ಯಾಕೆಂದರೆ ನಾವದನ್ನು ನಿರ್ಲಕ್ಷಿಸುವಂತಿಲ್ಲ. ಕೆನಡಾ ಯಾವತ್ತೂ ಭಯೋತ್ಪಾದನೆ, ಹಿಂಸಾಚಾರ, ಬೆದರಿಕೆಯ ವಿರುದ್ಧ ಬಲಿಷ್ಟವಾಗಿ ನಿಂತಿದೆ. ಜನರಿಂದ - ಜನರ ನಡುವಿನ ಸಂಬಂಧ ಮತ್ತು ವ್ಯಾಪಾರ ಸಂಬಂಧಗಳ ವಿಷಯದಲ್ಲಿ ಭಾರತವು ನಮ್ಮ ಅತ್ಯುತ್ತಮ ಪಾಲುದಾರ ದೇಶವಾಗಿದೆ. ಆದರೆ ಕೆನಡಾಕ್ಕೆ ತೃಪ್ತಿಯಾಗುವ ರೀತಿಯಲ್ಲಿ ನಿಜ್ಜಾರ್ ಹತ್ಯೆ ವಿಷಯ ಇತ್ಯರ್ಥಗೊಳ್ಳಬೇಕಿದೆ' ಎಂದು ಟ್ರೂಡೋ ಹೇಳಿದ್ದಾರೆ.