ಭಾರತಕ್ಕೆ ಹೊರಟಿದ್ದ ಸರಕು ನೌಕೆ ಹೌದಿ ಬಂಡುಗೋರರ ವಶಕ್ಕೆ ; ಇಸ್ರೇಲ್

Update: 2023-11-20 17:46 GMT

ಸಾಂದರ್ಭಿಕ ಚಿತ್ರ Photo: Canva

ಟೆಲ್‍ಅವೀವ್: ಯೆಮನ್ ಬಳಿ ದಕ್ಷಿಣ ಕೆಂಪುಸಮುದ್ರದಲ್ಲಿ ಭಾರತಕ್ಕೆ ಪ್ರಯಾಣಿಸುತ್ತಿದ್ದ ಸರಕು ನೌಕೆಯನ್ನು ಹೌದಿ ಬಂಡುಗೋರರು ರವಿವಾರ ವಶಕ್ಕೆ ಪಡೆದಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಬ್ರಿಟಿಷ್ ಉದ್ಯಮಿಯ ಮಾಲಕತ್ವದ, ಜಪಾನ್ ನಿರ್ವಹಿಸುವ ಈ ಸರಕು ನೌಕೆಯಲ್ಲಿ ವಿವಿಧ ದೇಶಗಳಿಗೆ ಸೇರಿದ 25 ಸಿಬಂದಿಗಳಿದ್ದರು. ದಕ್ಷಿಣ ಕೆಂಪು ಸಮುದ್ರದ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಈ ನೌಕೆ ಇಸ್ರೇಲ್‍ಗೆ ಸೇರಿದ್ದು ಎಂದು ಭಾವಿಸಿದ ಹೌದಿ ಬಂಡುಗೋರರು ಹೆಲಿಕಾಪ್ಟರ್ ಬಳಸಿ ನೌಕೆಯೊಳಗೆ ಇಳಿದು ಹಡಗನ್ನು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯಕ್ಕೆ ಇರಾನ್ ನೆರವಾಗಿದೆ ಎಂದು ಇಸ್ರೇಲ್ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News