ಹಮಾಸ್‍ನ ಭ್ರಮಾತ್ಮಕ ಬೇಡಿಕೆಯಿಂದ ಕದನ ವಿರಾಮ ಮಾತುಕತೆ ಸ್ಥಗಿತ: ಇಸ್ರೇಲ್

Update: 2024-02-18 17:10 GMT

Photo : NDTV 

ಟೆಲ್‍ಅವೀವ್: ಹಮಾಸ್ ಮುಂದಿರಿಸಿದ ಭ್ರಮಾತ್ಮಕ, ಅವಾಸ್ತವ ಬೇಡಿಕೆಗಳಿಂದಾಗಿ ಕೈರೋದಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆ ಸ್ಥಗಿತಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಆರೋಪಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೋರಿಕೆಯಂತೆ ಮತ್ತು ಈಜಿಪ್ಟ್ ಹಾಗೂ ಖತರ್ ಮಧ್ಯಸ್ಥಿಕೆಯಲ್ಲಿ ಗಾಝಾದಲ್ಲಿ ಕದನ ವಿರಾಮದ ಬಗ್ಗೆ ಕೈರೋದಲ್ಲಿ ಮಾತುಕತೆ ನಡೆದಿದೆ. ಆದರೆ ಹಮಾಸ್ ಕೆಲವು ಭ್ರಮಾತ್ಮಕ, ಅವಾಸ್ತವ ಷರತ್ತು ಮುಂದಿರಿಸಿದ್ದರಿಂದ ಮಾತುಕತೆ ಸ್ಥಗಿತಗೊಂಡಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಇದೇ ವೇಳೆ, ಫೆಲಸ್ತೀನ್ ದೇಶಸ್ಥಾಪನೆಯ ಬಗ್ಗೆ ಅಂತರಾಷ್ಟ್ರೀಯ ಒತ್ತಡಕ್ಕೆ ಇಸ್ರೇಲ್ ಎಂದಿಗೂ ಮಣಿಯುವುದಿಲ್ಲ. ಯಾವುದೇ ಪೂರ್ವ ಷರತ್ತುಗಳಿಲ್ಲದೆ ನೇರ ಮಾತುಕತೆಯಿಂದ ಮಾತ್ರ ಇದು ಸಾಧ್ಯ' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News