"ನ್ಯಾಯದ ವಿಚಾರದಲ್ಲಿ ಲೆಬನಾನ್ ಸೇರಿದಂತೆ ಅರಬ್ ಸಹೋದರರ ಪರ ನಾವು ನಿಲ್ಲಲಿದ್ದೇವೆ": ಲೆಬನಾನ್ ಮೇಲೆ ಇಸ್ರೇಲ್ ದಾಳಿಗೆ ಚೀನಾ ಖಂಡನೆ

Update: 2024-09-24 06:18 GMT

Photo: PTI

ನ್ಯೂಯಾರ್ಕ್: ಲೆಬನಾನ್ ಮೇಲೆ ಇಸ್ರೇಲ್ ದಾಳಿಯನ್ನು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಖಂಡಿಸಿದ್ದು, ಲೆಬನಾನ್ ನ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಎಲ್ಲಾ ರೀತಿಯ ಬೆಂಬಲವನ್ನು ನೀಡಲು ಚೀನಾ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಲೆಬನಾನಿನ ವಿದೇಶಾಂಗ ಸಚಿವ ಅಬ್ದುಲ್ಲಾ ಹಬೀಬ್‌ ಜೊತೆ ಮಾತನಾಡಿದ ವಾಂಗ್ ಯಿ, ನಾವು ಈ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ವಿಶೇಷವಾಗಿ ಲೆಬನಾನ್‌ನಲ್ಲಿ ಇತ್ತೀಚಿನ ಸಂವಹನ ಸಾಧನಗಳ(ಪೇಜರ್, ವಾಕಿ-ಟಾಕಿ) ಸ್ಫೋಟದ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ. ಲೆಬನಾನ್ ನಾಗರಿಕರ ಮೇಲೆ ನಡೆಸುತ್ತಿರುವ ವಿವೇಚನಾರಹಿತ ದಾಳಿಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಸೋಮವಾರ ನ್ಯೂಯಾರ್ಕ್‌ನಲ್ಲಿ ಯುಎನ್ ಜನರಲ್ ಅಸೆಂಬ್ಲಿ ಸಭೆ ನಡೆದಿತ್ತು. ಈ ವೇಳೆ ಲೆಬನಾನಿನ ವಿದೇಶಾಂಗ ಸಚಿವ ಅಬ್ದುಲ್ಲಾ ಹಬೀಬ್‌ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾಗಿದ್ದರು.

ನ್ಯಾಯದ ವಿಚಾರದಲ್ಲಿ ಲೆಬನಾನ್ ಸೇರಿದಂತೆ ಅರಬ್ ಸಹೋದರರ ಪರವಾಗಿ ನಾವು ನಿಲ್ಲಲಿದ್ದೇವೆ ಎಂದು ಚೀನಾ ದೇಶವು ಹೇಳಿಕೊಂಡಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News