ಅರ್ಥವ್ಯವಸ್ಥೆ ಟೀಕಿಸಿದ ಪತ್ರಕರ್ತನಿಗೆ ನಿಷೇಧ ವಿಧಿಸಿದ ಚೀನಾ

Update: 2023-06-27 23:15 IST
ಅರ್ಥವ್ಯವಸ್ಥೆ ಟೀಕಿಸಿದ ಪತ್ರಕರ್ತನಿಗೆ ನಿಷೇಧ ವಿಧಿಸಿದ ಚೀನಾ
  • whatsapp icon

ಬೀಜಿಂಗ್: ದೇಶದ ಆರ್ಥಿಕ ಸಮಸ್ಯೆಗಳನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ ಚೀನಾದ ಪ್ರಮುಖ ಪತ್ರಕರ್ತನನ್ನು ಸಾಮಾಜಿಕ ಮಾಧ್ಯಮದಿಂದ ನಿಷೇಧಿಸಲಾಗಿದೆ.

4.7 ಮಿಲಿಯನ್‌ಗೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಹಣಕಾಸು ತಜ್ಞ ಪತ್ರಕರ್ತ ಮತ್ತು ಲೇಖಕ ವು ಕ್ಸಿಯಾಬೊ ಸಂಬಂಧಿತ ಕಾನೂನು ಮತ್ತು ನಿಯಮವನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರ ಸಾಮಾಜಿಕ ಮಾಧ್ಯಮ ಖಾತೆ (ವೆಬಿಬೊ)ಯನ್ನು ನಿಷೇಧಿಸಲಾಗಿದೆ ಎಂದು ಟ್ವಿಟರ್ ವೇದಿಕೆಯನ್ನು ಹೋಲುವ ಚೀನಾದ ವೆಬಿಬೊ ಸಾಮಾಜಿಕ ಮಾಧ್ಯಮ ಸೋಮವಾರ ಹೇಳಿದೆ.

ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಆಗುತ್ತಿರುವ ಅಭಿವೃದ್ಧಿಯ ವಿರುದ್ಧ ಮತ್ತು ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ ಎಂದು ಸುಳ್ಳುಸುದ್ಧಿ ಪ್ರಸಾರ ಮಾಡುತ್ತಿರುವ ಮೂರು ಪರಿಶೀಲಿಸಿದ ಬಳಕೆದಾರರ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ವೆಬಿಬೊ ಹೇಳಿಕೆ ನೀಡಿದೆ. 2022ರ ಎಪ್ರಿಲ್ ಬಳಿಕದ ಎಲ್ಲಾ ವಿಷಯಗಳನ್ನೂ ಅವರ ಖಾತೆಯಿಂದ ಡಿಲೀಟ್ ಮಾಡಲಾಗಿದೆ ಎಂದು ಮತ್ತೊಂದು ವರದಿ ಹೇಳಿದೆ.

ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಚೀನಾದ ‘ಕಾಯಿಕ್ಸಿನ್’ ಪತ್ರಿಕೆಯ ವೆಬ್‌ಸೈಟ್ ಆವೃತ್ತಿಯಲ್ಲಿ ತಾವು ಬರೆಯುತ್ತಿರುವ ಅಂಕಣದಲ್ಲಿ ವು ಕ್ಸಿಯಾಬೊ ಕುಸಿಯುತ್ತಿರುವ ಜನನ ಪ್ರಮಾಣ, ನಿರುದ್ಯೋಗ ಪ್ರಮಾಣ ಆಕಾಶಕ್ಕೆ ತಲುಪಿರುವುದು ಸೇರಿದಂತೆ ದೇಶದ ಆರ್ಥಿಕ ಸಮಸ್ಯೆಯ ಬಗ್ಗೆ ವಿವರಿಸಿದ್ದರು. ಮೇ ತಿಂಗಳಲ್ಲಿ ಬರೆದ ಮತ್ತೊಂದು ಲೇಖನದಲ್ಲಿ ಚೀನಾದ ಹಾಲಿ ಅರ್ಥವ್ಯವಸ್ಥೆಯನ್ನು 1930ರ ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News