ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಪದವಿ ಹಿಂಪಡೆದ ಕೊಲಂಬಿಯಾ ವಿಶ್ವವಿದ್ಯಾನಿಲಯ!

Update: 2025-03-14 11:06 IST
ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಪದವಿ ಹಿಂಪಡೆದ ಕೊಲಂಬಿಯಾ ವಿಶ್ವವಿದ್ಯಾನಿಲಯ!

Photo credit: AP

  • whatsapp icon

ನ್ಯೂಯಾರ್ಕ್ : ಕಳೆದ ವರ್ಷ ಫೆಲೆಸ್ತೀನ್ ಪರ ಪ್ರತಿಭಟನೆಯ ಸಂದರ್ಭದಲ್ಲಿ ಕ್ಯಾಂಪಸ್ ಕಟ್ಟಡವನ್ನು ಆಕ್ರಮಿಸಿಕೊಂಡ ಆರೋಪದಲ್ಲಿ ಕೆಲವು ವಿದ್ಯಾರ್ಥಿಗಳನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯವು ಗುರುವಾರ ಅಮಾನತುಗೊಳಿಸಿದೆ ಮತ್ತು ಕೆಲ ವಿದ್ಯಾರ್ಥಿಗಳ ಡಿಪ್ಲೋಮಾ ಪದವಿಯನ್ನು ಹಿಂಪಡೆದುಕೊಂಡಿದೆ ಎಂದು ಸುದ್ದಿ ಸಂಸ್ಥೆ Associated Press ವರದಿ ಮಾಡಿದೆ.

ಹ್ಯಾಮಿಲ್ಟನ್ ಹಾಲ್ ನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವುದಲ್ಲದೆ ಕೆಲ ವಿದ್ಯಾರ್ಥಿಗಳ ಡಿಪ್ಲೋಮಾ ಪದವಿಯನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯವು ಹಿಂಪಡೆದುಕೊಂಡಿದೆ.

ʼಗಾಝಾ ಮೇಲಿನ ಯುದ್ಧವನ್ನು ಪ್ರತಿಭಟಿಸಲು 2024ರಲ್ಲಿ ಹ್ಯಾಮಿಲ್ಟನ್ ಹಾಲ್ ಅನ್ನು ಆಕ್ರಮಿಸಿಕೊಂಡ ವಿದ್ಯಾರ್ಥಿಗಳ ವಿರುದ್ಧ ನ್ಯಾಯಾಂಗ ಮಂಡಳಿಯು ಕ್ರಮಕ್ಕೆ ಆದೇಶಿಸಿದೆ ಎಂದು ವಿಶ್ವವಿದ್ಯಾಲಯವು ಇಮೇಲ್ ಸಂದೇಶದಲ್ಲಿ ತಿಳಿಸಿದೆ. ಪದವಿಗಳನ್ನು ಅಮಾನತುಗೊಳಿಸುವ, ಹೊರಹಾಕುವ ಅಥವಾ ಹಿಂತೆಗೆದುಕೊಳ್ಳುವ ನಿರ್ಧಾರವು ಶಿಸ್ತುಕ್ರಮದ ಭಾಗವಾಗಿದೆ ಎಂದು ಹೇಳಿದೆ. ಇಮೇಲ್ ನಲ್ಲಿ ಎಷ್ಟು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಿಲ್ಲ.

2024ರ ಏಪ್ರಿಲ್ 30ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪು ಹ್ಯಾಮಿಲ್ಟನ್ ಹಾಲ್‌ನ್ನು ಆಕ್ರಮಿಸಿಕೊಂಡು ಫೆಲೆಸ್ತೀನ್ ಪರ ಪ್ರತಿಭಟನೆಯನ್ನು ನಡೆಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News