ಅಮೆರಿಕದ ಜತೆ ಸಮಗ್ರ ಮಾತುಕತೆಯ ಅಗತ್ಯವಿದೆ : ರಶ್ಯ

Update: 2024-06-21 15:43 GMT

ಮಾಸ್ಕೋ : ಅಮೆರಿಕದೊಂದಿಗೆ ಭದ್ರತೆಗೆ ಸಂಬಂಧಿಸಿದ ಮಾತುಕತೆಯ ಅಗತ್ಯವನ್ನು ರಶ್ಯ ಗಮನಿಸಿದೆ. ಆದರೆ ಅವು ಸಮಗ್ರವಾಗಿರಬೇಕು ಮತ್ತು ಉಕ್ರೇನ್ ವಿಷಯವನ್ನು ಒಳಗೊಂಡಿರಬೇಕು ಎಂದು ರಶ್ಯ ಶುಕ್ರವಾರ ಪ್ರತಿಪಾದಿಸಿದೆ.

`ಎದುರಾಗಿರುವ ಸಮಸ್ಯೆಗಳ ಸಾಮಾನ್ಯ ಸಂಕೀರ್ಣದಿಂದ ಯಾವುದೇ ವಿಭಾಗವನ್ನು ಪ್ರತ್ಯೇಕಿಸುವಂತಿಲ್ಲ. ಅಮೆರಿಕದ ಜತೆ ನಾವು ಮಾತುಕತೆಗೆ ಮುಕ್ತವಾಗಿದ್ದೇವೆ. ಆದರೆ ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ, ಇದರಲ್ಲಿ ಅಮೆರಿಕದ ನೇರ ಒಳಗೊಳ್ಳುವಿಕೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನೂ ಒಳಗೊಂಡಿರುವ ಸಮಗ್ರ ಸಂವಾದದ ಅಗತ್ಯವಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೆ ಉಕ್ರೇನ್‍ಗೆ ಶಸ್ತ್ರಾಸ್ತ್ರ ಪೂರೈಸುವುದು ಯುದ್ಧದಲ್ಲಿ ನೇರವಾಗಿ ಶಾಮೀಲಾದಂತೆ ಆಗುವುದಿಲ್ಲ ಎಂದು ಅಮೆರಿಕ ಪ್ರತಿಪಾದಿಸುತ್ತಿದೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News