ಕಾಂಗೋ: ಗೋಮಾ ನಗರಕ್ಕೆ ನುಗ್ಗಿದ ರ್ವಾಂಡಾ ಬೆಂಬಲಿತ ಪಡೆ ; ಕನಿಷ್ಠ 17 ಮಂದಿ ಮೃತ್ಯು
Update: 2025-01-28 17:58 GMT
![ಕಾಂಗೋ: ಗೋಮಾ ನಗರಕ್ಕೆ ನುಗ್ಗಿದ ರ್ವಾಂಡಾ ಬೆಂಬಲಿತ ಪಡೆ ; ಕನಿಷ್ಠ 17 ಮಂದಿ ಮೃತ್ಯು ಕಾಂಗೋ: ಗೋಮಾ ನಗರಕ್ಕೆ ನುಗ್ಗಿದ ರ್ವಾಂಡಾ ಬೆಂಬಲಿತ ಪಡೆ ; ಕನಿಷ್ಠ 17 ಮಂದಿ ಮೃತ್ಯು](https://www.varthabharati.in/h-upload/2025/01/28/1500x900_1318681-congo.webp)
Photo Credit: AP
ಗೋಮಾ: ಬಂಡುಕೋರರು ಹಾಗೂ ಸೇನಾಪಡೆಗಳ ನಡುವೆ ಭೀಕರ ಕಾಳಗ ನಡೆಯುತ್ತಿರುವ ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 370ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಗೋಮಾದಲ್ಲಿ ಮುನ್ನುಗ್ಗುತ್ತಿರುವ ರ್ವಾಂಡಾ ಸೇನೆಯ ಬೆಂಬಲಿತ ಎಂ23 ಬಂಡುಕೋರರ ಪಡೆಗಳನ್ನು ಹಿಮ್ಮೆಟ್ಟಿಸಲು ಕಾಂಗೊ ಸೇನೆಯು ವ್ಯಾಪಕ ದಾಳಿಗಳನ್ನು ನಡೆಸುತ್ತಿದೆ.
ಕಾಂಗೋದ ಖನಿಜ ಸಮೃದ್ಧ ಪೂರ್ವ ಪ್ರಾಂತದ ಪ್ರಮುಖ ವಾಣಿಜ್ಯ ಕೇಂದ್ರವಾದ ಗೋಮಾದ ಮೇಲೆ ನಿಯಂತ್ರಣ ಸಾಧಿಸಲು ಉಭಯ ಪಡೆಗಳು ಭೀಕರ ಕದನದಲ್ಲಿ ತೊಡಗಿವೆ. ಈ ಮಧ್ಯೆ ರ್ವಾಂಡಾ ಗಡಿಯಲ್ಲಿ ಕಾಂಗೋ ಸೇನೆಯ ಗುಂಡಿಗೆ ಕನಿಷ್ಠ ಐವರು ನಾಗರಿಕರು ಸಾವನ್ನಪ್ಪಿದಾದರೆ.