ಇರಾಕ್‍ನಲ್ಲಿ ಅಮೆರಿಕ ನೇತೃತ್ವದ ಮೈತ್ರಿಪಡೆಯ ತೆರವಿಗೆ ಆಗ್ರಹ

Update: 2024-02-08 16:14 GMT

ಸಾಂದರ್ಭಿಕ | Photo:NDTV

ಬಗ್ದಾದ್: ಇರಾಕ್‍ನಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ವಿರುದ್ಧ ಅಮೆರಿಕದ ಪುನರಾವರ್ತಿತ ದಾಳಿಗಳು ದೇಶದಲ್ಲಿ ಅಮೆರಿಕ ನೇತೃತ್ವದ ಮೈತ್ರಿ ಪಡೆಯ ನಿಯೋಜನೆಯನ್ನು ಅಂತ್ಯಗೊಳಿಸುವುದನ್ನು ಅನಿವಾರ್ಯಗೊಳಿಸುತ್ತಿದೆ ಎಂದು ಇರಾಕ್ ಪ್ರಧಾನಿಯ ಮಿಲಿಟರಿ ವಕ್ತಾರ ಯಾಹ್ಯಾ ರಸೂಲ್ ಗುರುವಾರ ಹೇಳಿದ್ದಾರೆ.

ಇರಾಕ್‍ನಲ್ಲಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ತನ್ನ ತುಕಡಿ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಬುಧವಾರ ನಡೆಸಿದ ಪ್ರತಿದಾಳಿಯಲ್ಲಿ ಹಿಜ್ಬುಲ್ಲಾದ ಕಮಾಂಡರ್ ಹತನಾಗಿರುವುದಾಗಿ ಅಮೆರಿಕ ಹೇಳಿತ್ತು. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯಾಹ್ಯಾ ರಸೂಲ್ ` ಇರಾಕ್‍ನಲ್ಲಿ ಅಮೆರಿಕ ನೇತೃತ್ವದ ಮಿಲಿಟರಿ ಒಕ್ಕೂಟವು ಅಸ್ಥಿರತೆಗೆ ಕಾರಣವಾಗುವ ಅಂಶವಾಗಿದೆ ಮತ್ತು ಸಂಘರ್ಷದ ವರ್ತುಲದೊಳಗೆ ಇರಾಕ್ ಅನ್ನು ಸಿಲುಕಿಸುವ ಅಪಾಯಕ್ಕೆ ಕಾರಣವಾಗಿದೆ' ಎಂದರು.

ಐಸಿಸ್ ವಿರುದ್ಧದ ಹೋರಾಟಕ್ಕೆ ಇರಾಕ್ ಪಡೆಗಳಿಗೆ ನೆರವಾಗಲು ಅಮೆರಿಕ ನೇತೃತ್ವದ ಅಂತರಾಷ್ಟ್ರೀಯ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಐಸಿಸ್‍ನ ಪುನರುತ್ಥಾನವನ್ನು ತಡೆಯಲು ಸ್ಥಳೀಯ ಪಡೆಗಳಿಗೆ ನೆರವಾಗುವ ಉದ್ದೇಶದಿಂದ ಅಮೆರಿಕದ 2,500 ಯೋಧರು ಇರಾಕ್‍ನಲ್ಲಿದ್ದಾರೆ. ಕಳೆದ ಅಕ್ಟೋಬರ್‍ನಲ್ಲಿ ಹಮಾಸ್-ಇಸ್ರೇಲ್ ಸಂಘರ್ಷ ಭುಗಿಲೆದ್ದಂದಿನಿಂದ ಇರಾಕ್ ಮತ್ತು ಸಿರಿಯಾದ ನೆಲೆಗಳ ಮೇಲೆ ಅಮೆರಿಕದ ಪ್ರತೀಕಾರದ ದಾಳಿ ಹೆಚ್ಚಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News