ಗಗನಯಾತ್ರಿ ಸುನೀತಾ ವಿಲಿಯಮ್ಸ್, ವಿಲ್ಮೋರ್ ರಕ್ಷಣಾ ಕಾರ್ಯಾಚರಣೆ | ನಾಸಾ - ಬೋಯಿಂಗ್ ಸಭೆಯಲ್ಲಿ ಭಿನ್ನಾಭಿಪ್ರಾಯ?
ವಾಶಿಂಗ್ಟನ್: ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಇಬ್ಬರು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ವಿಲ್ಮೋರ್ ಅವರನ್ನು ಮನೆಗೆ ಕರೆತರುವುದು ಹೇಗೆ ಎಂಬ ಬಗ್ಗೆ ಬೋಯಿಂಗ್ ಕಾರ್ಯನಿರ್ವಾಹಕರೊಂದಿಗಿನ ಸಭೆಯ ವೇಳೆ ಭಿನ್ನಾಭಿಪ್ರಾಯ ಉಂಟಾಗಿರುವುದನ್ನು ನಾಸಾ ಬುಧವಾರ ಒಪ್ಪಿಕೊಂಡಿದೆ. ಆದರೆ ಸ್ಪೇಸ್ ಏರ್ ಕ್ರಾಫ್ಟ್ ನಲ್ಲಿನ ನಿಗೂಢ ಶಬ್ಧಗಳ ಕುರಿತ ವರದಿಯನ್ನು ತಳ್ಳಿ ಹಾಕಿದೆ.
ಈ ಬೆಳವಣಿಗೆ ಮಧ್ಯೆ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನ ಸುರಕ್ಷತೆಯ US ಬಾಹ್ಯಾಕಾಶ ಸಂಸ್ಥೆಯು ಗಗನಯಾತ್ರಿಗಳನ್ನು ರಕ್ಷಿಸಲು ಸ್ಪೇಸ್‌ಎಕ್ಸ್ ಕಂಪೆನಿ ಜೊತೆ ಸೇರಿಕೊಳ್ಳುತ್ತಿದೆ.
ನ್ಯೂಯಾರ್ಕ್ ಪೋಸ್ಟ್ ಉಲ್ಲೇಖಿಸಿದ ಮೂಲಗಳ ಪ್ರಕಾರ, ಸರ್ಕಾರಿ ಸಂಸ್ಥೆ ಮತ್ತು ಏರೋಸ್ಪೇಸ್ ಕಂಪನಿಯು ನಡುವಿನ ಚರ್ಚೆಗಳ ಬಳಿಕ ದೋಷಯುಕ್ತ ಸ್ಟಾರ್‌ಲೈನರ್‌ನಲ್ಲಿ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ವಿಲ್ಮೋರ್ ಜೋಡಿಯಿರುವುದು ತುಂಬಾ ಅಪಾಯಕಾರಿ ಎಂಬ ನಿರ್ಧಾರಕ್ಕೆ ಬರಲಾಗಿದೆ. ಅಂತಿಮವಾಗಿ, ಬೋಯಿಂಗ್ ಬಾಹ್ಯಾಕಾಶ ನೌಕೆಯು ಗುರುವಾರ ಸಿಬ್ಬಂದಿಗಳಿಲ್ಲದೆ ಭೂಮಿಗೆ ವಾಪಾಸ್ಸಾಗಿ ತನ್ನ ಗಮ್ಯ ಸ್ಥಾನವನ್ನು ತಲುಪುವ ಸಾಧ್ಯತೆ ಇದೆ.
ಫೆಬ್ರವರಿ 2025ರಲ್ಲಿ ಅವರನ್ನು ರಕ್ಷಿಸಲು ಎಲಾನ್ ಮಸ್ಕ್ ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್ ಬಾಹ್ಯಾಕಾಶಕ್ಕೆ ತೆರಳಲಿದ್ದು, ಅಲ್ಲಿಯವರೆಗೆ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಯಬೇಕಾಗುತ್ತದೆ.
ನಾಸಾದ ಸ್ಟೀವ್ ಸ್ಟಿಚ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಗಗನಯಾತ್ರಿಗಳಿಲ್ಲದೆ ಸ್ಟಾರ್‌ಲೈನರನ್ನು ಮನೆಗೆ ತರುವ ನಿರ್ಧಾರದ ಬಗ್ಗೆ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅಪಾಯದ ಬಗ್ಗೆ ಕೂಡ ಬೊಟ್ಟು ಮಾಡಿದ್ದಾರೆ.
ಆದರೆ ಬಾಹ್ಯಾಕಾಶದಲ್ಲಿ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಉತ್ಸಾಹದಲ್ಲಿ ಇದ್ದಾರೆ ಮತ್ತು ಅವರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಾಸಾ ಹೇಳಿಕೊಂಡಿದೆ.