ರಶ್ಯದ ಸಂಸ್ಥೆ, ಅಧಿಕಾರಿಗಳ ಮೇಲೆ 15ನೇ ಸುತ್ತಿನ ನಿರ್ಬಂಧ ವಿಧಿಸಿದ ಯುರೋಪಿಯನ್ ಯೂನಿಯನ್

Update: 2024-12-16 17:08 GMT

PC : PTI

ಬ್ರಸೆಲ್ಸ್: ಉಕ್ರೇನ್ ಮೇಲಿನ ರಶ್ಯದ ಯುದ್ಧಕ್ಕೆ ಸಂಬಂಧಿಸಿ ಚೀನಾದ 7 ಅಧಿಕಾರಿಗಳು, ಉತ್ತರ ಕೊರಿಯಾದ ರಕ್ಷಣಾ ಪಡೆಯ ಇಬ್ಬರು ಉನ್ನತ ಅಧಿಕಾರಿಗಳ ಸಹಿತ 80ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಂಸ್ಥೆಗಳ ವಿರುದ್ಧ ಯುರೋಪಿಯನ್ ಯೂನಿಯನ್ ನಿರ್ಬಂಧಗಳನ್ನು ಜಾರಿಗೊಳಿಸಿದೆ.

ಇದರಲ್ಲಿ `ಕಪ್ಪು ನೌಕಾಪಡೆ' ಎಂದು ಗುರುತಿಸಲಾದ 52 ಹಡಗುಗಳೂ ಸೇರಿವೆ. (ಅಂತರಾಷ್ಟ್ರೀಯ ಅಥವಾ ಏಕಪಕ್ಷೀಯ ನಿರ್ಬಂಧಗಳನ್ನು ತಪ್ಪಿಸಿಕೊಂಡು, ಗುರುತನ್ನು ಮರೆಮಾಚಿ, ಸರಕುಗಳನ್ನು ಸಾಗಿಸುವ ಹಡಗುಗಳು). ಇದರೊಂದಿಗೆ ಯುರೋಪಿಯನ್ ಯೂನಿಯನ್‍ನ `ಕಪ್ಪು ಪಟ್ಟಿಗೆ' ಸೇರ್ಪಡೆಗೊಂಡ `ಕಪ್ಪು ನೌಕಾಪಡೆಯ' ಹಡಗುಗಳ ಸಂಖ್ಯೆ 79ಕ್ಕೆ ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News