ಉತ್ತರ ಗಾಝಾ | ಭೀಕರ ಹಸಿವೆಯಿಂದ ಬಳಲುತ್ತಿರುವ ಅರ್ಧ ಜನಸಂಖ್ಯೆ, ಮೇ ತಿಂಗಳೊಳಗೆ ಬರಗಾಲ ನಿಶ್ಚಿತ: ವಿಶ್ವಸಂಸ್ಥೆ

Update: 2024-03-18 17:09 GMT

Photo : PTI

ವಿಶ್ವಸಂಸ್ಥೆ : ಗಾಝಾ ಪಟ್ಟಿಯಲ್ಲಿ ವಾಸಿಸುತ್ತಿರುವ ಅರ್ಧದಷ್ಟು ಜನರು ಭೀಕರ ಹಸಿವೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಾಯೋಜಕತ್ವದ ಆಹಾರ ಸುರಕ್ಷತಾ ಅಂದಾಜು ವರದಿ ಸೋಮವಾರ ಹೇಳಿದೆ. ಸೂಕ್ತ ಮತ್ತು ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮೇ ತಿಂಗಳ ವೇಳೆಗೆ ಉತ್ತರ ಗಾಝಾವನ್ನು ಬರಗಾಲ ಆವರಿಸಲಿದೆ ಎಂದು ಅದು ಎಚ್ಚರಿಸಿದೆ.

“ಒಂದು ಪ್ರದೇಶದ ಜನಸಂಖ್ಯೆಯ 50 ಶೇಕಡ ಭಾಗ ಭೀಕರ ಹಸಿವೆಯಿಂದ ಬಳಲುವುದು ಮತ್ತು ಬರಗಾಲಕ್ಕೆ ಒಳಗಾಗುವುದು ಹಿಂದೆಂದೂ ನಡೆದಿಲ್ಲ’’ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್ಎಒ)ಯ ಉಪ ಮಹಾ ನಿರ್ದೇಶಕಿ ಬೆತ್ ಬೆಕ್ಡೋಲ್ ಎಎಫ್ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಸೇನಾ ದಾಳಿಯಿಂದಾಗಿ ಸುಮಾರು 11 ಲಕ್ಷ ಜನರು “ಭೀಕರ ಆಹಾರ ಅಭದ್ರತೆ’’ಗೆ ಒಳಗಾಗಿದ್ದಾರೆ ಎಂದು ಇಂಟಗ್ರೇಟಡ್ ಫೂಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಶನ್ (ಐಪಿಸಿ) ಪಾರ್ಟ್ನರ್ಶಿಪ್ ತನ್ನ ವರದಿಯಲ್ಲಿ ಹೇಳಿದೆ.

ಮುಖ್ಯವಾಗಿ ಉತ್ತರ ಗಾಝಾದಲ್ಲಿ ಪರಿಸ್ಥಿತಿ ಭೀಕರವಾಗಿದೆ ಎಂದು ವರದಿ ಹೇಳುತ್ತದೆ. ಆಹಾರ ಮತ್ತು ಇತರ ನೆರವು ಸಾಮಗ್ರಿಗಳನ್ನು ವಿತರಿಸಲು ಅಲ್ಲಿಗೆ ಹೋಗುವುದು ಭಾರೀ ಕಷ್ಟದ ಕೆಲಸವಾಗಿದೆ ಎಂದು ಅದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News