ಪ್ಯಾರಿಸ್‍ನಲ್ಲಿ ಟ್ರಾಕ್ಟರ್ ಸಹಿತ ರೈತರ ಪ್ರತಿಭಟನೆ
Update: 2024-02-24 17:41 GMT
ಪ್ಯಾರಿಸ್: ಕೃಷಿ ಉತ್ಪನ್ನಗಳ ಆಮದು ಹೆಚ್ಚಿರುವುದನ್ನು ಹಾಗೂ ಪರಿಸರ ನಿಯಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಫ್ರಾನ್ಸ್ ನ ರೈತರು ಟ್ರ್ಯಾಕ್ಟರ್ ಸಹಿತ ರಾಜಧಾನಿ ಪ್ಯಾರಿಸ್ ನ ಪ್ರಮುಖ ರಸ್ತೆಗಳಲ್ಲಿ ತಡೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ರೈತರ ಜತೆ ಮಾತುಕತೆ ನಡೆಸಲು ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಮೇಲೆ ಒತ್ತಡ ಹೇರುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ಕಠಿಣ ಪರಿಸರ ನಿಯಮ ಹಾಗೂ ಯುರೋಪಿಯನ್ ಯೂನಿಯನ್ ಹೊರಗಿಂದ ಅಗ್ಗದ ಆಮದುಗಳಿಂದ ಎದುರಾದ ಸ್ಪರ್ಧೆ, ಕಡಿಮೆ ಆದಾಯವನ್ನು ಪ್ರತಿಭಟಿಸಿ ಯುರೋಪಿಯನ್ ಯೂನಿಯನ್ ನಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಪ್ಯಾರಿಸ್‍ನಲ್ಲಿ ರೈತರು ಟ್ರ್ಯಾಕ್ಟರ್ ಸಹಿತ ಪ್ರತಿಭಟನೆ ನಡೆಸಿದರು.