ಅಮೆರಿಕದ ನಿಯಂತ್ರಣ ನೀತಿ ವಿರುದ್ಧ ಚೀನಾದ ಜತೆಗೂಡಿ ಹೋರಾಟ : ರಶ್ಯ ಹೇಳಿಕೆ

Update: 2024-11-12 15:35 GMT

ಸೆರ್ಗೆಯ್ ಶೊಯಿಗು | PC  :PTI

ಬೀಜಿಂಗ್ : ಅಮೆರಿಕದ `ನಿಯಂತ್ರಣ'ವನ್ನು ಎದುರಿಸುವುದು ಚೀನಾ ಮತ್ತು ರಶ್ಯಗಳ ಅತ್ಯಂತ ತುರ್ತು ಕಾರ್ಯವಾಗಿದೆ ಎಂದು ರಶ್ಯದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೊಯಿಗು ಮಂಗಳವಾರ ಹೇಳಿದ್ದಾರೆ.

ಚೀನಾಕ್ಕೆ ಭೇಟಿ ನೀಡಿರುವ ಅವರು ಬೀಜಿಂಗ್‍ನಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆಗಿನ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಮೆರಿಕ ಮತ್ತು ಅದರ ಉಪಗ್ರಹಗಳು ರಶ್ಯ ಮತ್ತು ಚೀನಾದ ವಿರುದ್ಧ ನಿರ್ದೇಶಿಸಿರುವ ನಿಯಂತ್ರಣ ನೀತಿಯನ್ನು ಎದುರಿಸುವ ಅಗತ್ಯವನ್ನು ಪ್ರತಿಪಾದಿಸಿದ ಶೊಯಿಗು `ಉಭಯ ದೇಶಗಳ ನಡುವಿನ ಸಮಗ್ರ ಪಾಲುದಾರಿಕೆ ಮತ್ತು ಕಾರ್ಯತಂತ್ರದ ಸಹಕಾರವು ಇಂದಿನ ಜಗತ್ತಿನಲ್ಲಿ ಎರಡು ಶಕ್ತಿಗಳ ನಡುವಿನ ಸಹಯೋಗದ ಮಾದರಿಯನ್ನು ಪ್ರತಿನಿಧಿಸುತ್ತದೆ. ಇದು ಶೀತಲ ಸಮರದ ಸಮಯದಲ್ಲಿ ರೂಪುಗೊಂಡಂತಹ ಮಿಲಿಟರಿ-ರಾಜಕೀಯ ಮೈತ್ರಿಯಲ್ಲದಿದ್ದರೂ ಎರಡೂ ದೇಶಗಳ ನಡುವಿನ ಸಂಬಂಧಗಳು ಅಂತರ್‍ದೇಶೀಯ ಸಂಬಂಧಕ್ಕಿಂತಲೂ ಮಿಗಿಲಾದುದು' ಎಂದರು. ಉಭಯ ಅಧಿಕಾರಿಗಳು ಕಾರ್ಯತಂತ್ರದ ಭದ್ರತಾ ಸಮಾಲೋಚನೆಗಳನ್ನು ನಡೆಸಿದ್ದು ಪರಸ್ಪರ ನಂಬಿಕೆ, ವಿಶ್ವಾಸವನ್ನು ಹೆಚ್ಚಿಸುವ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಚೀನಾ ಸರಕಾರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News