ಟರ್ಕಿ ನೈಟ್‍ಕ್ಲಬ್‍ನಲ್ಲಿ ಬೆಂಕಿ | ಕನಿಷ್ಠ 25 ಮಂದಿ ಸಾವು

Update: 2024-04-02 17:57 GMT

ಸಾಂದರ್ಭಿಕ ಚಿತ್ರ

ಅಂಕಾರ: ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ನೈಟ್‍ಕ್ಲಬ್‍ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದು ಇತರ 8 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಇಸ್ತಾಂಬುಲ್‍ನ ಬೆಸಿಕ್ಟಾಸ್ ಜಿಲ್ಲೆಯಲ್ಲಿರುವ 16 ಅಂತಸ್ತಿನ ವಸತಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ನೈಟ್‍ಕ್ಲಬ್‍ನಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದಾಗ ಬೆಂಕಿ ದುರಂತ ಸಂಭವಿಸಿದ್ದು 25 ಮಂದಿ ಮೃತರಾಗಿದ್ದಾರೆ. ಗಾಯಗೊಂಡಿರುವ 8 ಜನರಲ್ಲಿ 7 ಜನರ ಸ್ಥಿತಿ ಗಂಭೀರವಾಗಿದೆ. ಬೆಂಕಿ ದುರಂತದ ಕಾರಣ ತಿಳಿದುಬಂದಿಲ್ಲ. ಬೆಂಕಿಯನ್ನು ನಿಯಂತ್ರಿಸಲಾಗಿದ್ದು ನೈಟ್‍ಕ್ಲಬ್‍ನ ಮ್ಯಾನೇಜರ್ ಹಾಗೂ ನವೀಕರಣ ಕಾರ್ಯದ ಮೇಲುಸ್ತುವಾರಿ ವಹಿಸಿದ್ದ ವ್ಯಕ್ತಿ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News