ಫ್ರಾನ್ಸ್ ಪ್ರಧಾನಿಯಾಗಿ ಮೈಕೆಲ್ ಬಾರ್ನಿಯರ್ ನೇಮಕ

Update: 2024-09-06 17:48 GMT

Photo credit : AP

ಪ್ಯಾರಿಸ್ : ಯುರೋಪಿಯನ್ ಯೂನಿಯನ್ನ ಮಾಜಿ ಮುಖ್ಯ ಬ್ರೆಕ್ಸಿಟ್ ಸಮಾಲೋಚಕ ಮೈಕೆಲ್ ಬಾರ್ನಿಯರ್ ರನ್ನು ನೂತನ ಪ್ರಧಾನಿಯಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ನೇಮಕಗೊಳಿಸಿದ್ದಾರೆ.

73 ವರ್ಷದ ಬಾರ್ನಿಯರ್ 2016ರಿಂದ 2021ರವರೆಗೆ ಯುರೋಪಿಯನ್ ಯೂನಿಯನ್ನ ಮುಖ್ಯ ಬ್ರೆಕ್ಸಿಟ್ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಿದ್ದರು. ಇದಕ್ಕೂ ಮುನ್ನ ಫ್ರಾನ್ಸ್ ಸರಕಾರದ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು ಮತ್ತು ಯುರೋಪಿಯನ್ ಯೂನಿಯನ್ ಕಮಿಷನರ್ ಆಗಿಯೂ ಕೆಲಸ ಮಾಡಿದ್ದರು.

ಜೂನ್ ನಲ್ಲಿ ನಡೆದಿದ್ದ ಅವಧಿಪೂರ್ವ ಚುನಾವಣೆಯಲ್ಲಿ ಮಾಕ್ರೋನ್ ಪಕ್ಷಕ್ಕೆ ಹಿನ್ನಡೆಯಾಗಿದ್ದು ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದೆ ಅತಂತ್ರ ಸಂಸತ್ ನಿರ್ಮಾಣಗೊಂಡಿತ್ತು. ಎರಡು ತಿಂಗಳ ರಾಜಕೀಯ ಚಟುವಟಿಕೆಯ ಬಳಿಕ ಮಾಕ್ರೋನ್ ಪ್ರಧಾನಿ ಹುದ್ದೆಗೆ ಬಲಪಂಥೀಯ ಮೈಕೆಲ್ ಬಾರ್ನಿಯರ್ರನ್ನು ನೇಮಕಗೊಳಿಸಿದ್ದು , ಎಲ್ಲಾ ಪಕ್ಷಗಳ ವಿಶ್ವಾಸ ಪಡೆದು ಸ್ಥಿರ ಸರಕಾರ ರಚಿಸುವುದಾಗಿ ಬಾರ್ನಿಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News