ಯುರೋಪಿಯನ್ ಕಮಿಷನ್ ಸದಸ್ಯತ್ವಕ್ಕೆ ಫ್ರಾನ್ಸ್ ನ ಥಿಯರಿ ಬ್ರೆಟನ್ ರಾಜೀನಾಮೆ

Update: 2024-09-16 17:33 GMT

ಥಿಯರಿ ಬ್ರೆಟನ್ | PC : thehindu.com

ಪ್ಯಾರಿಸ್ : ಯುರೋಪಿಯನ್ ಕಮಿಷನ್(ಇಸಿ)ನ ಪ್ರಭಾವೀ ಮುಖಂಡರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಫ್ರಾನ್ಸ್ ನ ಥಿಯರಿ ಬ್ರೆಟನ್ ಸೋಮವಾರ ಇಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಮುಂದಿನ ಯುರೋಪಿಯನ್ ಯೂನಿಯನ್ ಕಾರ್ಯಕಾರಿ ಮಂಡಳಿಗೆ ತಾನು ದೇಶದ ಅಭ್ಯರ್ಥಿಯಾಗಿರುವುದಿಲ್ಲ ಎಂದು ಘೋಷಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಯುರೋಪಿಯನ್ ಕಮಿಷನ್ ನ ಅತ್ಯುನ್ನತ ಸದಸ್ಯರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಬ್ರೆಟನ್, 27 ರಾಷ್ಟ್ರಗಳ ಇಯುವಿನ ತಂತ್ರಜ್ಞಾನ ನಿಯಂತ್ರಣ, ಕೋವಿಡ್ ಲಸಿಕೆ ಪ್ರಕ್ರಿಯೆ ಹಾಗೂ ರಕ್ಷಣಾ ಕೈಗಾರಿಕೆಗಳನ್ನು ಉತ್ತೇಜಿಸುವ ಪ್ರಯತ್ನಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

`ಕೆಲ ದಿನಗಳ ಹಿಂದೆ ಇಸಿ ಅಧ್ಯಕ್ಷೆ ಉರ್ಸುಲಾ ವಾನ್ಡಿರ್ ಲಿಯೆನ್ ತನ್ನ (ಬ್ರೆಟನ್) ಹೆಸರನ್ನು ಕಾರ್ಯಕಾರಿ ಮಂಡಳಿಯ ಸದಸ್ಯತ್ವದಿಂದ ವೈಯಕ್ತ ಕಾರಣಗಳಿಗಾಗಿ ಹಿಂದಕ್ಕೆ ಪಡೆಯುವಂತೆ ಫ್ರಾನ್ಸ್ ಸರಕಾರವನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಅಂತಿಮ ಕ್ಷಣದ ಬದಲಾವಣೆಯಲ್ಲಿ ಮತ್ತೊಂದು ಹೆಸರನ್ನು ಸೂಚಿಸುವಂತಾಯಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಯುರೋಪಿಯನ್ ಕಮಿಷನ್ನೆಲ್ಲಿ ಕರ್ತವ್ಯ ನಿರ್ವಹಿಸಲು ನನ್ನಿಂದ ಆಗದು ಎಂಬ ನಿರ್ಧಾರಕ್ಕೆ ಬಂದಿದ್ದೇನೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ರಾಜೀನಾಮೆ ಪತ್ರದಲ್ಲಿ ಬ್ರೆಟನ್ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News