ಪಾಕಿಸ್ತಾನ | ಇಮ್ರಾನ್ ಪಕ್ಷದ 10 ಸಂಸದರಿಗೆ ಜಾಮೀನು
Update: 2024-09-16 17:20 GMT
ಇಸ್ಲಮಾಬಾದ್ : ಮಾಜಿ ಪ್ರಧಾನಿ ಇಮ್ರಾನ್ಖಾಿನ್ ಅವರ ಪಕ್ಷದ 10 ಸಂಸದರಿಗೆ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರುಗೊಳಿಸಿದೆ ಎಂದು ಎಎಫ್ಪಿಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಶನಿವಾರ ಇಸ್ಲಮಾಬಾದ್ನಮಲ್ಲಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ(ಪಿಟಿಐ) ನಡೆಸಿದ್ದ ಪ್ರತಿಭಟನೆ ಸಂದರ್ಭ 10 ಸಂಸದರ ಸಹಿತ ಪಕ್ಷದ ಕನಿಷ್ಠ 30 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಸಂಸದರ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದ ಹೊಸ ಕಾನೂನು ಹಾಗೂ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆ ನಡೆಯುವುದಕ್ಕೆ ಎರಡು ದಿನ ಮೊದಲು ಅನುಮೋದಿಸಲಾಗಿದ್ದ `ಶಾಂತಿಯುತ ಸಭೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಯ್ದೆ'ಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಟೀಕಿಸಿವೆ.