ಇಸ್ರೇಲ್ ಮೇಲೆ ಹೌದಿಗಳ ಕ್ಷಿಪಣಿ ದಾಳಿ
Update: 2024-09-15 15:33 GMT
ಜೆರುಸಲೇಂ : ಉತ್ತರ ಯೆಮನ್ ಮೇಲೆ ನಿಯಂತ್ರಣ ಹೊಂದಿರುವ ಇರಾನ್ ಬೆಂಬಲಿತ ಹೌದಿಗಳು ಇದೇ ಮೊದಲ ಬಾರಿಗೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು ಕ್ಷಿಪಣಿ ಮಧ್ಯ ಇಸ್ರೇಲ್‍ನ ಜನವಸತಿಯಿಲ್ಲದ ಪ್ರದೇಶಕ್ಕೆ ಅಪ್ಪಳಿಸಿದೆ. ಯಾವುದೇ ಸಾವು-ನೋವಿನ ವರದಿಯಾಗಿಲ್ಲ.
ಸ್ಥಳೀಯ ಕಾಲಮಾನ ಬೆಳಿಗ್ಗೆ 6:35ಕ್ಕೆ ಕ್ಷಿಪಣಿ ಅಪ್ಪಳಿಸುವುದಕ್ಕೆ ಕೆಲ ಕ್ಷಣಗಳ ಮೊದಲು ಇಸ್ರೇಲ್‍ನಾದ್ಯಂತ ಸೈರನ್ ಮೊಳಗಿದೆ ಮತ್ತು ಸ್ಥಳೀಯರು ಕ್ಷಿಪಣಿ ದಾಳಿಯಿಂದ ರಕ್ಷಣೆ ನೀಡುವ ಬಾಂಬ್‍ಶೆಲ್ಟರ್ ಗೆ ಧಾವಿಸಿದರು. ಕ್ಷಿಪಣಿ ಅಪ್ಪಳಿಸಿದಾಗ ಭಾರೀ ಸದ್ದು ಕೇಳಿಬಂದಿದೆ. ಕ್ಷಿಪಣ ಜನವಸತಿಯಿಲ್ಲದ ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಯೆಮನ್‍ನ ಕ್ಷಿಪಣಿ ಇಸ್ರೇಲನ್ನು ತಲುಪಿದೆ. ಕ್ಷಿಪಣಿಯನ್ನು ತುಂಡರಿಸಲು ಶತ್ರುಗಳ 20 ಕ್ಷಿಪಣಿಗಳು ವಿಫಲವಾಗಿದೆ. ಇದು ಪ್ರಾರಂಭ' ಎಂದು ಹೌದಿ ವಕ್ತಾರರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.