ಸಿರಿಯಾ | ಇಸ್ರೇಲ್ ದಾಳಿಯಲ್ಲಿ 15 ಮಂದಿ ಸಾವು

Update: 2024-11-14 16:58 GMT

PC : PTI (ಸಾಂದರ್ಭಿಕ ಚಿತ್ರ)

ದಮಾಸ್ಕಸ್ : ಸಿರಿಯಾ ರಾಜಧಾನಿ ದಮಾಸ್ಕಸ್‍ನ ಉಪನಗರಗಳಲ್ಲಿ ಹಲವು ಜನವಸತಿ ಕಟ್ಟಡಗಳ ಮೇಲೆ ಗುರುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 15 ಮಂದಿ ಹತರಾಗಿದ್ದು ಇತರ 16 ಮಂದಿ ಗಾಯಗೊಂಡಿರುವುದಾಗಿ ಸಿರಿಯಾ ಸರಕಾರಿ ಸ್ವಾಮ್ಯದ ಸನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ದಮಾಸ್ಕಸ್‍ ನ ಪಶ್ಚಿಮದಲ್ಲಿರುವ ಮಝೆಹಾ ಮತ್ತು ಖುಡ್ಸಯಾ ನಗರಗಳಲ್ಲಿ ಹಲವು ಕಟ್ಟಡಗಳು ಧ್ವಂಸಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡಗಳಲ್ಲಿ ಫೆಲಸ್ತೀನ್ ಸಶಸ್ತ್ರ ಹೋರಾಟಗಾರರ ಗುಂಪಿನ ಕೇಂದ್ರ ಕಚೇರಿಯಿರುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದ ಬಳಿಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News