ಬ್ರೆಝಿಲ್ | ಸುಪ್ರೀಂಕೋರ್ಟ್ ಬಳಿ ಸ್ಫೋಟ; ಒಬ್ಬ ವ್ಯಕ್ತಿ ಸಾವು
Update: 2024-11-14 15:03 GMT
ಬ್ರಸೀಲಿಯಾ : ಬ್ರೆಝಿಲ್‍ನ ಸುಪ್ರೀಂಕೋರ್ಟ್ ಬಳಿ ಬುಧವಾರ ಸಂಜೆ ಸಂಭವಿಸಿದ ಅವಳಿ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಭದ್ರತಾ ಕಾರಣಗಳಿಗಾಗಿ ಗುರುವಾರ ಸಂಸತ್‍ನ ಕಲಾಪಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬ್ರೆಝಿಲ್‍ನ ರಿಯೋಡಿ ಜನೈರೋದಲ್ಲಿ ನವೆಂಬರ್ 18ರಂದು ನಡೆಯಲಿರುವ ಜಿ20 ಶೃಂಗಸಭೆಗೂ ಮುನ್ನ ನಡೆದಿರುವ ಸ್ಫೋಟವು ಭದ್ರತೆಯ ಆತಂಕವನ್ನು ಹೆಚ್ಚಿಸಿದೆ. ಬ್ರೆಝಿಲ್ ರಾಜಧಾನಿ ಬ್ರಸೀಲಿಯಾದ `ಮೂರು ಶಕ್ತಿ ಕೇಂದ್ರ' ಎಂದು ಕರೆಯಲಾಗುವ ಬಿಗಿ ಭದ್ರತೆಯ ಪ್ರದೇಶದಲ್ಲಿ (ಸುಪ್ರೀಂಕೋರ್ಟ್, ಸಂಸತ್ತು ಮತ್ತು ಅಧ್ಯಕ್ಷರ ಭವನ) ಸ್ಫೋಟ ಸಂಭವಿಸಿದೆ. ಇದು ಆತ್ಮಹತ್ಯಾ ಬಾಂಬ್ ದಾಳಿಯಾಗಿದ್ದು ಮೃತಪಟ್ಟ ವ್ಯಕ್ತಿ ಆತ್ಮಹತ್ಯಾ ಬಾಂಬರ್ ಆಗಿರುವ ಸಾಧ್ಯತೆಯಿದೆ' ಎಂದು ಬ್ರೆಝಿಲ್‍ನ ಫೆಡರಲ್ ಜಿಲ್ಲೆಯ ಲೆಫ್ಟಿನೆಂಟ್ ಗವರ್ನರ್ ಸೆಲೀನಾ ಲಿಯೊ ಹೇಳಿದ್ದಾರೆ