ರಶ್ಯ | ಕಾರು ಬಾಂಬ್ ಸ್ಫೋಟದಲ್ಲಿ ನೌಕಾ ಪಡೆ ಅಧಿಕಾರಿ ಸಾವು

Update: 2024-11-14 15:03 GMT

ಸಾಂದರ್ಭಿಕ ಚಿತ್ರ

ಮಾಸ್ಕೋ : ಆಕ್ರಮಿತ ಕ್ರಿಮಿಯಾ ಪ್ರಾಂತದ ಸೆವಾಸ್ಟೊಪೊಲ್ ನಗರದಲ್ಲಿ ಬುಧವಾರ ನಡೆದ ಕಾರು ಬಾಂಬ್ ಸ್ಫೋಟದಲ್ಲಿ ರಶ್ಯ ನೌಕಾಪಡೆಯ ಉನ್ನತ ಅಧಿಕಾರಿ ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ಉಕ್ರೇನ್ ಪ್ರಜೆ ನಡೆಸಿರುವುದಾಗಿ ಉಕ್ರೇನ್‍ನ ಭದ್ರತಾ ಪಡೆಯ ಮೂಲಗಳು ಹೇಳಿವೆ.

ಮೃತ ಅಧಿಕಾರಿಯನ್ನು ರಶ್ಯ ನೌಕಾಪಡೆಯ ಉನ್ನತ ಅಧಿಕಾರಿ ವ್ಯಾಲೆರಿ ಟ್ರಂಕೋವ್ಸ್‍ಕಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಬಾಂಬ್ ಇರಿಸಿ ದೂರ ನಿಯಂತ್ರಕ ಸಾಧನದ ಮೂಲಕ ಸ್ಫೋಟಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಭಯೋತ್ಪಾದಕ ಕೃತ್ಯ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News