ಪಾಕಿಸ್ತಾನ: ಸೇನಾ ವಾಹನವನ್ನು ಗುರಿಯಾಗಿಸಿ ಸ್ಫೋಟ; 4 ಮಂದಿಗೆ ಗಾಯ

Update: 2025-01-11 15:30 GMT

ಸಾಂದರ್ಭಿಕ ಚಿತ್ರ 

ಪೇಷಾವರ: ಪಾಕಿಸ್ತಾನದ ಪ್ರಕ್ಷುಬ್ಧ ವಾಯವ್ಯ ಪ್ರಾಂತದಲ್ಲಿ ಅರೆಸೇನಾ ಪಡೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ನಡೆಸಿದ ಸ್ಪೋಟದಲ್ಲಿ ನಾಲ್ವರು ನಾಗರಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಬಲೂಚಿಸ್ತಾನ್ ಪ್ರಾಂತದ ಚಾಮನ್ ನಗರದಲ್ಲಿ ಶುಕ್ರವಾರ ದಾಳಿ ನಡೆದಿರುವುದಾಗಿ ಅಧಿಕಾರಿಗಳು ಶನಿವಾರ ವರದಿ ಮಾಡಿದ್ದಾರೆ.

ಅರೆಸೇನಾ ಪಡೆಯ ವಾಹನ ಸಾಗುವ ರಸ್ತೆಯ ಪಕ್ಕದಲ್ಲಿ ಮೋಟಾರ್ ಬೈಕ್‍ನಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಇರಿಸಿದ್ದು ಮಿಲಿಟರಿ ವಾಹನ ಹಾದುಹೋಗುವ ಸಂದರ್ಭದಲ್ಲೇ ದೂರನಿಯಂತ್ರಕದ ಮೂಲಕ ಸ್ಫೋಟ ನಡೆಸಲಾಗಿದೆ. ಅರೆಸೇನಾ ಪಡೆಯ ಸಿಬ್ಬಂದಿ ಗಾಯಗೊಂಡಿಲ್ಲ. ಆದರೆ ರಸ್ತೆ ಬದಿಯಲ್ಲಿ ನಿಂತಿದ್ದ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News