ವೆನಿಜುವೆಲಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಿಕೋಲಸ್ ಮಡುರೊ
Update: 2025-01-11 12:07 GMT
ಕಾರ್ಕಸ್: ಚುನಾವಣಾ ಅಕ್ರಮ ಆರೋಪಗಳು ಕೇಳಿ ಬಂದ ಹೊರತಾಗಿಯೂ ಶುಕ್ರವಾರ ವೆನಿಜುವೆಲಾದ ಅಧ್ಯಕ್ಷರಾಗಿ ನಿಕೋಲಸ್ ಮಡುರೊ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿಕೋಲಸ್ ಮಡುರೊ ಮೂರನೆಯ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಅಧಿಕಾರಾವಧಿ ಮುಂದಿನ ಆರು ವರ್ಷಗಳವರೆಗೆ ಇರಲಿದೆ.
ಕಳೆದ ಜುಲೈ ತಿಂಗಳಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕೋಲಸ್ ಮಡುರೊ ಶೇ. 51ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದು, ವಿರೋಧ ಪಕ್ಷದ ನಾಯಕ ಜೌನ್ ಗೈಡೊ ಶೇ. 44ರಷ್ಟು ಮತ ಪಡೆದು ಪರಾಭವಗೊಂಡಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯಸ್ಥ ಎಲ್ವಿಸ್ ಅಮೊರೊಸ್ ಘೋಷಿಸಿದ್ದರು.
ಈ ಘೋಷಣೆ ಬಳಿಕ, ಚುನಾವಣೆ ಹಾಗೂ ಮತ ಎಣಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ವಿದೇಶಿ ನಾಯಕರು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಜೌನ್ ಗೈಡೊ ಪ್ರತಿಭಟನೆ ನಡೆಸಿದ್ದರು.