ಲಾಸ್ ಏಂಜಲೀಸ್ ಕಾಡ್ಗಿಚ್ಚು: ಮಾಜಿ ಬಾಲನಟ ರೋರಿ ಸೈಕ್ಸ್ ಮೃತ್ಯು

Update: 2025-01-11 16:55 GMT

PC : X/@shelleysykes

ನ್ಯೂಯಾರ್ಕ್ : ಅಮೆರಿಕದ ಲಾಸ್‍ಏಂಜಲೀಸ್‍ನಲ್ಲಿ ನಿಯಂತ್ರಣ ಮೀರಿ ಅಬ್ಬರಿಸುತ್ತಿರುವ ಕಾಡ್ಗಿಚ್ಚಿಗೆ ಆಸ್ಟ್ರೆಲಿಯಾದ ಮಾಜಿ ಬಾಲನಟ (ಅಂಧ ನಟ) ರೋರಿ ಸೈಕ್ಸ್ ಬಲಿಯಾಗಿರುವುದಾಗಿ `ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ.

ಲಾಸ್ ಏಂಜಲೀಸ್‍ನಲ್ಲಿ ರೋರಿ ಸೈಕ್ಸ್ ಕುಟುಂಬ ವಾಸಿಸುತ್ತಿದ್ದ ಮಲಿಬು ಕಾಟೇಜ್ ಕಾಡ್ಗಿಚ್ಚಿನ ಬೆಂಕಿಯಲ್ಲಿ ಸುಟ್ಟುಹೋಗಿದ್ದು ರೋರಿ ಸೈಕ್ಸ್‍ರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಮನೆಯಲ್ಲಿ ನೀರಿನ ಕೊರತೆಯಿದ್ದ ಕಾರಣ, ದೃಷ್ಟಿದೋಶದ ಜತೆ ಸೆರೆಬ್ರಲ್ ಪಾಲ್ಸಿ(ಚಲನೆಗೆ ಸಂಬಂಧಿಸಿದ ಸಮಸ್ಯೆ) ಸಮಸ್ಯೆಯಿಂದಲೂ ಬಳಲುತ್ತಿದ್ದ ರೋರಿ ಸೈಕ್ಸ್‍ರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅವರ ತಾಯಿ ಹೇಳಿದ್ದಾರೆ.

ಬ್ರಿಟನ್‍ನ ಟಿವಿ ಕಾರ್ಯಕ್ರಮ `ಕಿಡ್ಡೀ ಕೇಪರ್ಸ್'ನ ಕೆಲವು ಕಂತುಗಳಲ್ಲಿ ರೋರಿ ಸೈಕ್ಸ್ ಬಾಲನಟನಾಗಿ ನಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News