ಗಾಝಾ | ಇಸ್ರೇಲ್ ದಾಳಿಯಲ್ಲಿ 30 ಫೆಲೆಸ್ತೀನೀಯರು ಮೃತ್ಯು

Update: 2024-11-05 15:57 GMT

 ಸಾಂದರ್ಭಿಕ ಚಿತ್ರ PC : PTI

ಗಾಝಾ : ಸೋಮವಾರ ರಾತ್ರಿಯಿಂದ ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 30 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಫೆಲೆಸ್ತೀನ್ ನ ಆರೋಗ್ಯಾಧಿಕಾರಿಗಳನ್ನು ಉಲ್ಲೇಖಿಸಿ ವಫಾ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಗಾಝಾದ ಅಲ್-ಝವಾಯ್ದ ನಗರದ ಮೇಲೆ ಮಂಗಳವಾರ ಬೆಳಿಗ್ಗೆ ನಡೆದ ಪ್ರತ್ಯೇಕ ದಾಳಿಯಲ್ಲಿ ಇತರ 4 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ದಕ್ಷಿಣ ರಫಾ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ದಾಸ್ತಾನಿರಿಸಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಮಧ್ಯ ಗಾಝಾ ಪಟ್ಟಿ ಮತ್ತು ಜಬಾಲಿಯಾ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್ ಮೂಲಸೌಕರ್ಯ ತಾಣಗಳನ್ನು ನಾಶಗೊಳಿಸಲಾಗಿದ್ದು ಹಲವು ಹೋರಾಟಗಾರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ನಿರಂತರ ದಾಳಿ ಮತ್ತು ಸ್ಥಳಾಂತರಗೊಳ್ಳುವಂತೆ ಆದೇಶಿಸುವ ಮೂಲಕ ಉತ್ತರ ಗಾಝಾದ ಎರಡು ನಗರಗಳು ಹಾಗೂ ನಿರಾಶ್ರಿತರ ಶಿಬಿರಗಳನ್ನು ಖಾಲಿ ಮಾಡಿ `ಬಫರ್ ವಲಯಗಳನ್ನು' ನಿರ್ಮಿಸುವ ಗುರಿಯನ್ನು ಇಸ್ರೇಲ್ ಹೊಂದಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News