ಗಾಝಾ ಕದನ ವಿರಾಮ ಮಾತುಕತೆ ಆರಂಭ
Update: 2024-08-15 16:23 GMT
ದೋಹ: ಗಾಝಾದಲ್ಲಿ ಕದನ ವಿರಾಮ ಒಪ್ಪಂದದ ಕುರಿತ ಹೊಸ ಸುತ್ತಿನ ಮಾತುಕತೆ ಗುರುವಾರ ಮಧ್ಯಾಹ್ನ ಖತರ್ ರಾಜಧಾನಿ ದೋಹದಲ್ಲಿ ಪ್ರಾರಂಭವಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಖತರ್ ಪ್ರಧಾನಿ ಶೇಕ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ, ಈಜಿಪ್ಟ್ ನ ಗುಪ್ತಚರ ಮುಖ್ಯಸ್ಥ ಅಬ್ಬಾಸ್ ಕಮೆಲ್, ಅಮೆರಿಕದ ಸಿಐಎ ನಿರ್ದೇಶಕ ಬಿಲ್ ಬನ್ರ್ಸ್, ಮಧ್ಯಪ್ರಾಚ್ಯಕ್ಕೆ ಅಮೆರಿಕದ ಪ್ರತಿನಿಧಿ ಬ್ರೆಟ್ ಮೆಗರ್ಕ್, ಇಸ್ರೇಲ್ ಗುಪ್ತಚರ ಮುಖ್ಯಸ್ಥ ಡೇವಿಡ್ ಬಾರ್ನಿಯಾ, ದೇಶೀಯ ಭದ್ರತಾ ಸೇವೆಯ ಮುಖ್ಯಸ್ಥ ರೋನೆನ್ ಬ್ರಾರ್, ಮಿಲಿಟರಿ ಅಧಿಕಾರಿ ನಿಟ್ಝಾನ್ ಅಲೋನ್ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ಗುರುವಾರದ ಮಾತುಕತೆಯಲ್ಲಿ ಹಮಾಸ್‍ನ ಪ್ರತಿನಿಧಿ ಪಾಲ್ಗೊಂಡಿಲ್ಲ. ಮಾತುಕತೆ ಮುಗಿದ ಬಳಿಕ ಹಮಾಸ್ ನಿಯೋಗದ ಜತೆ ಮಧ್ಯಸ್ಥಿಕೆದಾರರು ಪ್ರತ್ಯೇಕ ಸಭೆ ನಡೆಸಲಿರುವುದಾಗಿ ವರದಿಯಾಗಿದೆ.