ಗಾಝಾ | ಬಾಚಣಿಗೆಯಿಲ್ಲದೇ ತಲೆ ಕೂದಲು ಕತ್ತರಿಸುತ್ತಿರುವ ಬಾಲಕಿಯರು!

Update: 2024-08-14 09:18 GMT

Credit: Reuters photo

ಗಾಝಾ : ಇಸ್ರೇಲ್‌ ದಾಳಿಯಿಂದ ನಲುಗಿರುವ ಗಾಝಾದಲ್ಲಿ ಹಲವು ಅಗತ್ಯ ವಸ್ತುಗಳ ಕೊರತೆ ಎದುರಾಗಿದ್ದು, ಸಂತ್ರಸ್ತ ಬಾಲಕಿಯರಿಗೆ ತಲೆ ಬಾಚಲು ಬಾಚಣಿಗೆ ಕೂಡ ಇಲ್ಲದಂತಾಗಿದೆ. ಈ ಕುರಿತು ಬಾಲಕಿಯರು ಗಾಝಾದ ಮಕ್ಕಳ ತಜ್ಞೆ ಲೊಬ್ನಾ ಅಲ್-ಅಝೈಝಾ ಅವರ ಬಳಿ ದೂರಿದಾಗ ಕೂದಲು ಕತ್ತರಿಸುವಂತೆ ಅವರು ಮಕ್ಕಳಿಗೆ ಸಲಹೆ ನೀಡಿದ್ದಾರೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಾಚಣಿಗೆ ಮಾತ್ರವಲ್ಲದೆ ಸಾಬೂನು, ಶ್ಯಾಂಪೂ, ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಗೃಹಬಳಕೆಯ ಶುಚಿತ್ವದ ವಸ್ತುಗಳೂ ಈಗ ಗಾಝಾದಲ್ಲಿಲಭ್ಯವಿಲ್ಲ.

ತ್ಯಾಜ್ಯ ನಿರ್ವಹಣೆ ಹಾಗೂ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು ಸಾಂಕ್ರಾಮಿಕ ರೋಗಗಳ ಭೀತಿಗೆ ಕಾರಣವಾಗಿದ್ದು ಫಂಗಲ್‌ ಸೋಂಕುಗಳ ಪ್ರಕರಣಗಳೂ ಹೆಚ್ಚಾಗುತ್ತಿವೆ.

ಹೆಚ್ಚಿನ ಜನರು ಚರ್ಮದ ಸೋಂಕಿನ ಸಮಸ್ಯೆಗೆ ಒಳಗಾಗಿದ್ದಾರೆ. ನಿರಾಶ್ರಿತ ಶಿಬಿರದಲ್ಲಿ ಜನರು ಕಿಕ್ಕಿರಿದು ತುಂಬಿದ್ದಾರೆ. ವಿಪರೀತ ಸೆಖೆ ಹಾಗೂ ಸ್ನಾನ ಮಾಡಲು ನೀರಿನ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತಿವೆ.

ಅಂತರರಾಷ್ಟ್ರೀಯ ಸಮುದಾಯದಿಂದ ಸಹಾಯಹಸ್ತವೂ ಕಡಿಮೆಯಾಗಿದೆ. ಔಷಧಿಗಳ ಬೆಲೆಗಳೂ ನಿರಾಶ್ರಿತರಿಗೆ ಬಹಳ ದುಬಾರಿಯಾಗಿ ಬಿಟ್ಟಿವೆ. ಸುಟ್ಟ ಗಾಯಕ್ಕೆ ಹಚ್ಚುವ ಆಯಿಂಟ್ಮೆಂಟ್ ಟ್ಯೂಬ್ ಬೆಲೆ ಈಗ 200 ಶೆಕೆಲ್ ಗಳಷ್ಟು ದುಬಾರಿಯಾಗಿದೆ. ಅಂದರೆ ಭಾರತದ ಸುಮೂರು 4513 ರೂಪಾಯಿಗಳು!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News