ಪಾಕಿಸ್ತಾನ | ಹೆಲಿಕಾಪ್ಟರ್ ದುರಂತದಲ್ಲಿ 6 ಮಂದಿ ಮೃತ್ಯು

Update: 2024-09-28 16:16 GMT

ಸಾಂದರ್ಭಿಕ ಚಿತ್ರ (PTI)

ಪೇಷಾವರ : ಅಫ್ಘಾನಿಸ್ತಾನ ಗಡಿಯ ಸಮೀಪ ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಇಂಜಿನ್ ವೈಫಲ್ಯದಿಂದಾಗಿ ಹೆಲಿಕಾಪ್ಟರ್ ಪತನಗೊಂಡಿದ್ದು 6 ಮಂದಿ ಸಾವನ್ನಪ್ಪಿದ್ದು ಇತರ 8 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ತೈಲ ಸಂಸ್ಥೆ ಬಾಡಿಗೆಗೆ ಪಡೆದಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಉತ್ತರ ವಝೀರಿಸ್ತಾನದಲ್ಲಿ ಇಂಜಿನ್ ವೈಫಲ್ಯದಿಂದ ಪತನಗೊಂಡಿದ್ದು ವಿಮಾನದಲ್ಲಿದ್ದ 14 ಜನರಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಮೂವರು ರಶ್ಯನ್ ಪೈಲಟ್‍ಗಳ ಸಹಿತ 8 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News