ಫೆಲೆಸ್ತೀನ್ ಗೆ ಬೆಂಬಲ ಪುನರುಚ್ಚರಿಸಿದ ಭಾರತ

India reaffirms support to Palestine

Update: 2023-11-29 16:30 GMT

Photo: Canva

ವಿಶ್ವಸಂಸ್ಥೆ : ಫೆಲೆಸ್ತೀನ್ ಜನರೊಂದಿಗಿನ ದೇಶದ ದೀರ್ಘಕಾಲದ ಸಂಬಂಧವನ್ನು ಪುನರುಚ್ಚರಿಸಿದ ಭಾರತ, ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ನಾಗರಿಕರ ಜೀವಹಾನಿ ಆಗುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಮಂಗಳವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ` ಭಾರತ  ಮತ್ತು ಫೆಲೆಸ್ತೀನ್ ನಡುವೆ ಆಳವಾದ ಐತಿಹಾಸಿಕ ಸಂಬಂಧವಿದೆ. ಶಾಂತಿ ಮತ್ತು ಸಮೃದ್ಧಿಗಾಗಿ ಫೆಲೆಸ್ತೀನೀಯರು ನಡೆಸುತ್ತಿರುವ ಪ್ರಯತ್ನಕ್ಕೆ ನಮ್ಮ ನಿರಂತರ ಬೆಂಬಲವಿದೆ. ಗಾಝಾದಲ್ಲಿ ಮಾನವೀಯ ಯುದ್ಧವಿರಾಮ ಶಾಶ್ವತವಾಗಿ ಜಾರಿಯಾದರೆ ಅಲ್ಲಿನ ನಾಗರಿಕರಿಗೆ ತುರ್ತು ಅಗತ್ಯದ ವಸ್ತುಗಳನ್ನು ಒದಗಿಸಲು ಸಾಧ್ಯವಾಗುತ್ತದೆ' ಎಂದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News