ರಾಜಸ್ಥಾನದಲ್ಲಿ ಭಾರತ-ಅಮೆರಿಕ ಜಂಟಿ ಸಮರಾಭ್ಯಾಸ ಅಂತ್ಯ

Update: 2024-09-21 17:07 GMT

PC : PTI

ಜೈಪುರ : ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ನಡೆದ ತರಬೇತಿ ಚಟುವಟಿಕೆ ಸಮಾರೋಪ ಸಮಾರಂಭದ ನಂತರ, ಶನಿವಾರ ಭಾರತ-ಅಮೆರಿಕ ಜಂಟಿ ಸಮರಾಭ್ಯಾಸ ಅಂತ್ಯಗೊಂಡಿದೆ.

"ಯುದ್ಧಾಭ್ಯಾಸ-24' ಹೆಸರಿನಲ್ಲಿ ನಡೆದ 20ನೆಯ ದ್ವಿಪಕ್ಷೀಯ ಜಂಟಿ ಸಮರಾಭ್ಯಾಸವು ವಿಶ್ವ ಸಂಸ್ಥೆ ಕಡ್ಡಾಯಗೊಳಿಸಿರುವ ಅರೆ ಪಟ್ಟಣ ಹಾಗೂ ಅರೆ ಮರಳುಗಾಡು ಪ್ರದೇಶದಲ್ಲಿ ನಡೆಯುವ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯ ಕಡೆ ಗಮನ ಕೇಂದ್ರೀಕರಿಸಿತ್ತು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಭಯ ದೇಶಗಳ ನಡುವಿನ ನಿಯಮಗಳು, ದೈಹಿಕ ಸಾಮರ್ಥ್ಯ, ವ್ಯೂಹಾತ್ಮಕ ಸಮರಾಭ್ಯಾಸ, ತಂತ್ರಗಳನ್ನು ಈ ಸಮರಾಭ್ಯಾಸ ಒಳಗೊಂಡಿತ್ತು. ಇವುಗಳನ್ನು ಸಮಾರೋಪ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು ಎಂದು ರಕ್ಷಣಾ ಇಲಾಖೆಯ ವಕ್ತಾರರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಜಂಟಿ ಸಮರಾಭ್ಯಾಸದಲ್ಲಿ ಭಾರತದ ತಂಡವನ್ನು ಇನ್‌ಫ್ಯಾಂಟ್ರಿ ಬ್ರಿಗೇಡ್ ಮುಖ್ಯ ಕಾರ್ಯಾಲಯ ಮತ್ತು ರಜಪೂತ್ ರೆಜಿಮೆಂಟ್‌ನ ಬೆಟಾಲಿಯನ್ ಗುಂಪು ಪ್ರತಿನಿಧಿಸಿದರೆ, ಅಮೆರಿಕ ತಂಡವು 1-24 ಇನ್‌ಫ್ಯಾಂಟ್ರಿ ಬೆಟಾಲಿಯನ್ ಹಾಗೂ ಅಲಾಸ್ಕ ಮೂಲದ 11ನೇ ವಾಯುದಳ ವಿಭಾಗದ ತಂಡವು ಪ್ರತಿನಿಧಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News