ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕಗೆ ತೆರಳಿದ ಪ್ರಧಾನಿ ಮೋದಿ | ಅನಿವಾಸಿ ಭಾರತೀಯರಿಂದ ಭವ್ಯ ಸ್ವಾಗತ

Update: 2024-09-21 17:20 GMT

PC :@narendramodi

ವಾಷಿಂಗ್ಟನ್ : ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಅಮೆರಿಕ ಭೇಟಿಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬರಮಾಡಿಕೊಂಡರು.

ಕ್ವಾಡ್ ನಾಯಕರ ಶೃಂಗಸಭೆ ಈ ಬಾರಿ ಭಾರತದಲ್ಲಿ ನಡೆಯಬೇಕಿತ್ತಾದರೂ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅದನ್ನು ಅಮೆರಿಕದಲ್ಲಿ ನಡೆಸಲು ಉತ್ಸುಕತೆ ತೋರಿದ್ದರಿಂದ, ಈ ಬಾರಿಯ ಕ್ವಾಡ್ ನಾಯಕರ ಶೃಂಗಸಭೆ ಅಮೆರಿಕದಲ್ಲಿ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಜಪಾನ್ ಪ್ರಧಾನಿ ಫುಮಿಯೊ ಆ್ಯಂಥೊನಿ ಪಾಲಿಗೆ ಇದು ವಿದಾಯದ ಶೃಂಗಸಭೆಯಾಗಿದೆ. ಅವರಿಬ್ಬರ ಅಧಿಕಾರಾವಧಿಯು ಕ್ರಮವಾಗಿ ಜನವರಿ 25, 2025 ಹಾಗೂ ಅಕ್ಟೋಬರ್ 1, 2024ಕ್ಕೆ ಅಂತ್ಯಗೊಳ್ಳಲಿದೆ.

ಅಮೆರಿಕಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನಿವಾಸಿ ಭಾರತೀಯರಿಂದ ಭವ್ಯ ಸ್ವಾಗತ ದೊರೆಯಿತು. ನಂತರ ಅನಿವಾಸಿ ಭಾರತೀಯ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಇಂಡೊ-ಪೆಸಿಫಿಕ್ ಸಹಕಾರ ಉತ್ತೇಜನ ಹಾಗೂ ಗಾಝಾ ಮತ್ತು ಉಕ್ರೇನ್ ಯುದ್ಧಗಳಲ್ಲಿ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಕುರಿತು ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News