ಉಕ್ರೇನ್ ಡ್ರೋನ್ ದಾಳಿ | ರಶ್ಯದ ಶಸ್ತ್ರಾಸ್ತ್ರ ಡಿಪೋದಲ್ಲಿ ಬೆಂಕಿ

Update: 2024-09-21 16:27 GMT

ಸಾಂದರ್ಭಿಕ ಚಿತ್ರ - AI

ಮಾಸ್ಕೋ : ವಾಯವ್ಯ ರಶ್ಯದಲ್ಲಿ ಉಕ್ರೇನ್ನಸ ಡ್ರೋನ್ ದಾಳಿಯಿಂದ ಮತ್ತೊಂದು ಶಸ್ತ್ರಾಸ್ತ್ರ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಶಸ್ತ್ರಾಸ್ತ್ರ ಡಿಪೋದಲ್ಲಿ ಸರಣಿ ಸ್ಫೋಟದ ಬಳಿಕ ಪ್ರಮುಖ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ.

ಶುಕ್ರವಾರ ತಡರಾತ್ರಿಯಿಂದ ವಾಯವ್ಯ ರಶ್ಯದ ಭೂಭಾಗ ಹಾಗೂ ರಶ್ಯ ಆಕ್ರಮಿತ ಕ್ರಿಮಿಯಾ ಪ್ರಾಂತದ ಮೇಲೆ 100ಕ್ಕೂ ಅಧಿಕ ಡ್ರೋನ್ಗಹಳಿಂದ ದಾಳಿ ನಡೆಸಲಾಗಿದೆ. ಬುಧವಾರ ಉಕ್ರೇನ್ನಮ ಡ್ರೋನ್ ದಾಳಿಯಿಂದ ಹಾನಿಗೊಳಗಾದ ಶಸ್ತ್ರಾಸ್ತ್ರ ಡಿಪೋದ ಸ್ವಲ್ಪ ದೂರದಲ್ಲಿರುವ, ಟೊರೊಪೆಟ್ಸ್ ನಗರದಲ್ಲಿರುವ ಮತ್ತೊಂದು ಡಿಪೋಕ್ಕೆ ಡ್ರೋನ್ ಅಪ್ಪಳಿಸಿದ್ದು ಬೆಂಕಿ ಕಾಣಿಸಿಕೊಂಡಿದೆ. ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ಡಿಪೋಗೆ ಸಂಪರ್ಕ ಕಲ್ಪಿಸುವ ಸುಮಾರು 100 ಕಿ.ಮೀ ಉದ್ದದ ಹೆದ್ದಾರಿಯನ್ನು ಮುಚ್ಚಲಾಗಿದ್ದು ಸಮೀಪದ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಸಮೀಪದ ಮತ್ತೊಂದು ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ರಶ್ಯದ ಮಾಧ್ಯಮಗಳು ವರದಿ ಮಾಡಿವೆ.

ದಾಳಿಯ ಬಳಿಕ ಶಸ್ತ್ರಾಸ್ತ್ರ ಡಿಪೋದಿಂದ ಬೆಂಕಿಯ ಚೆಂಡೊಂದು ಆಗಸಕ್ಕೆ ಸಿಡಿಯುತ್ತಿರುವ ವೀಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಕ್ರಾಸ್ನೋಡರ್ ಪ್ರದೇಶದಲ್ಲಿ ಶನಿವಾರ ನಡೆದ ಪ್ರತ್ಯೇಕ ದಾಳಿಯಲ್ಲಿ ನೈಋತ್ಯ ರಶ್ಯದಲ್ಲಿನ ಮದ್ದುಗುಂಡುಗಳ ಡಿಪೋ ಮತ್ತು ಕ್ಷಿಪಣಿ ಶಸ್ತ್ರಾಗಾರದಲ್ಲಿ ಬೆಂಕಿ ಕಾಣಿಸಿಕೊಂಡು ಸರಣಿ ಸ್ಫೋಟ ಸಂಭವಿಸಿದೆ. ರಶ್ಯದ ಪ್ರದೇಶ ಮತ್ತು ಆಕ್ರಮಿತ ಕ್ರಿಮಿಯಾ ಪ್ರಾಂತದ ಮೇಲೆ ಹಾರಿಬಂದ ಉಕ್ರೇನ್ನವ ಬಹುತೇಕ ಡ್ರೋನ್ಗಕಳನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಶನಿವಾರ ಪ್ರತಿಪಾದಿಸಿದೆ

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News