ಲೆಬನಾನ್ ಸಂವಹನ ಸಾಧನಗಳ ಮೇಲಿನ ದಾಳಿಗೆ ವಿಶ್ವಸಂಸ್ಥೆ ಖಂಡನೆ

Update: 2024-09-21 16:09 GMT

ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ | PTI

ನ್ಯೂಯಾರ್ಕ್ : ಲೆಬನಾನ್ನ,ಲ್ಲಿ ಸಂವಹನ ಸಾಧನಗಳ ಮೇಲಿನ ದಾಳಿಯು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದ್ದು ಇದು ಯುದ್ಧಾಪರಾಧ ಆಗಿರಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಲೆಬನಾನ್ನಕಲ್ಲಿ ಹಿಜ್ಬುಲ್ಲಾಗಳು ಬಳಸುವ ಕೈಯಲ್ಲಿ ಹಿಡಿಯುವ ಸಂವಹನ ಸಾಧನಗಳ ಸ್ಫೋಟವು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಗಾಝಾದಲ್ಲಿ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹಮಾಸ್ ಶಸ್ತ್ರಾಸ್ತ್ರ ಹೋರಾಟಗಾರರ ಗುಂಪು ಮತ್ತು ಲೆಬನಾನ್ನಮಲ್ಲಿ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಮತ್ತೊಂದು ಶಸ್ತ್ರಾಸ್ತ್ರ ಹೋರಾಟಗಾರರ ಗುಂಪು ಹಿಜ್ಬುಲ್ಲಾಗಳ ನಡುವಿನ ಸಂಘರ್ಷ ಉಲ್ಬಣಗೊಳ್ಳುವುದು ವ್ಯಾಪಕವಾದ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ಎಚ್ಚರಿಕೆ ನೀಡಿದೆ.

ಲೆಬನಾನ್ನ ಲ್ಲಿ ಮಂಗಳವಾರ ಪೇಜರ್ ಮತ್ತು ಬುಧವಾರ ವಾಕಿ-ಟಾಕಿ ಸರಣಿ ಸ್ಫೋಟದಿಂದ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು ಸುಮಾರು 3,000 ಮಂದಿ ಗಾಯಗೊಂಡಿದ್ದಾರೆ. ಈ ಸರಣಿ ಸ್ಫೋಟಕ್ಕೆ ಇಸ್ರೇಲ್ ಹೊಣೆ ಎಂದು ಹಿಜ್ಬುಲ್ಲಾ ಆರೋಪಿಸಿದೆ. `ನಾಗರಿಕರಲ್ಲಿ ಭಯವನ್ನು ಹರಡುವ ಉದ್ದೇಶದಿಂದ ನಡೆಸುವ ಹಿಂಸಾಚಾರ ಯುದ್ಧಾಪರಾಧವಾಗಿದೆ' ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್ ವೋಕರ್ ಟರ್ಕ್ ಹೇಳಿದ್ದಾರೆ. ಲೆಬನಾನ್ನಯಲ್ಲಿ ನಡೆದ ಪೇಜರ್, ವಾಕಿಟಾಕಿ ಸ್ಫೋಟದ ಬಗ್ಗೆ ಚರ್ಚಿಸಲು ಅಲ್ಜೀರಿಯಾದ ಕೋರಿಕೆ ಮೇರೆಗೆ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಟರ್ಕ್ `ದಾಳಿಗಳ ಪ್ರಮಾಣ, ಪರಿಣಾಮ ಮತ್ತು ಪ್ರಭಾವದಿಂದ ದಿಗ್ಭ್ರಮೆಗೊಂಡಿರುವುದಾಗಿ ಹೇಳಿದ್ದಾರೆ.

`ಈ ದಾಳಿಗಳು ಯುದ್ಧದಲ್ಲಿ ಹೊಸ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ದೈನಂದಿನ ಜೀವನದ ಭಾಗವಾಗಿರುವ ಸಂವಹನ ಸಾಧನಗಳು ಶಸ್ತ್ರಾಸ್ತ್ರಗಳಾಗಿ ಮಾರ್ಪಟ್ಟು ಮಾರುಕಟ್ಟೆ ಪ್ರದೇಶಗಳು, ಬೀದಿಗಳಲ್ಲಿ ಹಾಗೂ ಮನೆಗಳಲ್ಲಿ ಸ್ಫೋಟಿಸುತ್ತವೆ. ಈ ರೀತಿಯ ಕ್ರಿಯೆಗಳು ಸಾಮಾನ್ಯ, ಸಹಜ ಪ್ರಕ್ರಿಯೆಗಳಾಗಿ ಮಾರ್ಪಾಡಾಗಲು ಸಾಧ್ಯವಿಲ್ಲ. ಸ್ಫೋಟಗಳ ಬಗ್ಗೆ ಸ್ವತಂತ್ರ, ಕೂಲಂಕುಷ ಮತ್ತು ಪಾರದರ್ಶಕ ತನಿಖೆಯ ಅಗತ್ಯವಿದೆ. ಈ ದಾಳಿಗಳನ್ನು ಆದೇಶಿಸಿದವರು ಮತ್ತು ನಡೆಸಿದವರನ್ನು ಹೊಣೆಗಾರರನ್ನಾಗಿಸಬೇಕು. ಈ ರೀತಿಯ ಯುದ್ಧತಂತ್ರ ಹೊಸದು ಮತ್ತು ಅಪರಿಚಿತವಾಗಿರಬಹುದು. ಆದರೆ ಅಂತರಾಷ್ಟ್ರೀಯ ಮಾನವೀಯ ಹಕ್ಕು ಮತ್ತು ಮಾನವ ಹಕ್ಕುಗಳ ಕಾನೂನುಗಳು ಅನ್ವಯಿಸುತ್ತದೆ ಮತ್ತು ಅದನ್ನು ಗೌರವಿಸಬೇಕು' ಎಂದು ಟರ್ಕ್ ಆಗ್ರಹಿಸಿದ್ದಾರೆ.

`ಇತ್ತೀಚಿನ ಉಲ್ಬಣವು ಗಾಝಾದಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಮುಂದುವರಿದಿರುವ ಸಂಘರ್ಷದಲ್ಲಿ ಕಂಡುಬಂದಿರುವ ಸಂಘರ್ಷ ಮತ್ತು ವಿನಾಶದ ಪ್ರಮಾಣವನ್ನು ಮೀರಿಸುವ ದುರಂತಕ್ಕೆ ಕಾರಣವಾಗುವ ಅಪಾಯವನ್ನು ತಂದಿಟ್ಟಿದೆ' ಎಂದು ವಿಶ್ವಸಂಸ್ಥೆಯ ರಾಜಕೀಯ ಮತ್ತು ಶಾಂತಿ ನಿರ್ಮಾಣ ವ್ಯವಹಾರಗಳ ಅಧೀನ ಕಾರ್ಯದರ್ಶಿ ರೋಸ್ಮೇಎರಿ ಡಿಕಾರ್ಲೋ ಕಳವಳ ವ್ಯಕ್ತಪಡಿಸಿದರು. ಗಾಝಾದಲ್ಲಿ ನಡೆಯುತ್ತಿರುವ ದೈನಂದಿನ ಗುಂಡಿನ ದಾಳಿ, ಬಾಂಬ್ ದಾಳಿ ಸುಮಾರು 1 ವರ್ಷದಿಂದ ಮುಂದುವರಿದಿದ್ದು ವ್ಯಾಪಕ ಸಾವು-ನೋವು, ನಾಶ-ನಷ್ಟಕ್ಕೆ ಕಾರಣವಾಗಿದೆ. ಈಗಲೂ ಕಾಲ ಮಿಂಚಿಲ್ಲ. ಈಗಲೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಭದ್ರತಾ ಮಂಡಳಿಯ ನಿರ್ಣಯ ಸಂಖ್ಯೆ 1701ರ ಪೂರ್ಣ ಪ್ರಮಾಣದ ಅನುಷ್ಟಾನ ಮತ್ತು ತಕ್ಷಣವೇ ಯುದ್ಧದ ನಿಲುಗಡೆಗೆ ಎಲ್ಲಾ ಪಕ್ಷಗಳೂ ಬದ್ಧವಾಗಿರಬೇಕೆಂದು ಪ್ರಧಾನ ಕಾರ್ಯದರ್ಶಿ ಕರೆ ನೀಡಿದ್ದಾರೆ' ಎಂದು ಡಿಕಾರ್ಲೋ ಹೇಳಿದರು.

ಭದ್ರತಾ ಮಂಡಳಿಯ ಹಾಲಿ ಅಧ್ಯಕ್ಷನಾಗಿರುವ ಸ್ಲೊವೇನಿಯಾದ ಪ್ರತಿನಿಧಿ ಸ್ಯಾಮುವೆಲ್ ಜೊಬರ್ ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. `ನಾವು ಅಪಾಯಕಾರಿ ಹೊಸ ಪ್ರದೇಶದಲ್ಲಿ ಹೆಜ್ಜೆ ಹಾಕುತ್ತಿದ್ದೇವೆ ಮತ್ತು ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅಸ್ತಿತ್ವದಲ್ಲಿರುವ ಕಾನೂನು ಬಾಧ್ಯತೆಗಳನ್ನು ಗೌರವಿಸುವ ಅಗತ್ಯವನ್ನು ವಿಶ್ವಸಂಸ್ಥೆ ಒತ್ತಿಹೇಳುತ್ತದೆ. ನಾಗರಿಕ ಬಳಕೆಯ ವಸ್ತುಗಳನ್ನು ಆಯುಧಗೊಳಿಸಬಾರದು. ಅಂತರಾಷ್ಟ್ರೀಯ ಕಾನೂನು ಸ್ಪಷ್ಟವಾಗಿದೆ. ಹಿಂಸಾಚಾರದ ವಲಯವು ವ್ಯಾಪಕ ಸಂಘರ್ಷವಾಗಿ ರೂಪುಗೊಳ್ಳುವ ಅಪಾಯವಿದೆ ' ಎಂದವರು ಹೇಳಿದರು. 

ಲೆಬನಾನ್ ಮತ್ತೊಂದು ಗಾಝಾ ಆಗಬಾರದು : ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್

 ಲೆಬನಾನ್ ಮತ್ತೊಂದು ಗಾಝಾ ಆಗಲು ಜಾಗತಿಕ ಸಮುದಾಯ ಆಸ್ಪದ ನೀಡುವುದಿಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.

ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಪೂರ್ಣ ಪ್ರಮಾಣದ ಯುದ್ಧವನ್ನು ನಾವು ತಪ್ಪಿಸಲೇ ಬೇಕು. ಗಾಝಾದಲ್ಲಿನ ಯುದ್ಧವನ್ನು ನಾವು ತಪ್ಪಿಸಬೇಕು ಎಂದ ಅವರು, ಸಂಘರ್ಷದ ಅವಧಿ ಮತ್ತು ವ್ಯಾಪಕ ಪ್ರಮಾಣದ ನಾಶ, ವಿನಾಶದ ದೃಷ್ಟಿಯಿಂದ ಹೇಳುವುದಾದರೆ ಗಾಝಾ ಸಂಘರ್ಷ ತನ್ನ ನಿರೀಕ್ಷೆಗಳನ್ನು ಮೀರಿದೆ. ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ತೀವ್ರ ಖಂಡನೆಯನ್ನು ಪುನರಾವರ್ತಿಸಿದ ಅವರು ಆದರೆ ಇದು ಫೆಲೆಸ್ತೀನ್ ಜನತೆಯ ಸಾಮೂಹಿಕ ಶಿಕ್ಷೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದರು.

ಸಂಘರ್ಷದ ಆರಂಭದಿಂದಲೂ ಯುದ್ಧವಿರಾಮ ಮತ್ತು ಮಾನವೀಯ ನೆರವು ವಿತರಣೆಯ ಬಗ್ಗೆ ವಿಶ್ವಸಂಸ್ಥೆ ನಿರಂತರ ಆಗ್ರಹಿಸುತ್ತಾ ಬಂದಿದೆ. ಆದರೆ ಮನವರಿಕೆಗೆ ಸಿದ್ಧವಿಲ್ಲದವರನ್ನು ಮನವೊಲಿಸಲು ಸಾಧ್ಯವಿಲ್ಲ ಎಂದು ಗುಟೆರಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News