ಬಲೂಚಿಸ್ತಾನ: ಭದ್ರತಾ ಭೀತಿ; ಮೂರು ವಿವಿಗಳ ಕ್ಯಾಂಪಸ್ ಮುಚ್ಚುಗಡೆ

Update: 2025-03-18 23:14 IST
ಬಲೂಚಿಸ್ತಾನ: ಭದ್ರತಾ ಭೀತಿ; ಮೂರು ವಿವಿಗಳ ಕ್ಯಾಂಪಸ್ ಮುಚ್ಚುಗಡೆ

Photo courtesy: University of Balochistan quetta / facebook

  • whatsapp icon

ಕ್ವೆಟ್ಟಾ: ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮೂರು ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳನ್ನು ಅನಿರ್ದಿಷ್ಟಾವಧಿ ಮುಚ್ಚುಗಡೆಗೆ ಆದೇಶ ಹೊರಡಿಸಲಾಗಿದೆಯೆಂದು ಪಾಕ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಬಲೂಚಿಸ್ತಾನದ ಪ್ರಾಂತೀಯ ರಾಜಧಾನಿಯ ಕ್ವೆಟ್ಟಾದಲ್ಲಿರುವ ಎರಡು ವಿವಿಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚುಗಡೆಗೊಳಿಸುವಂತೆ ವಾರಾಂತ್ಯದಲ್ಲಿ ಆದೇಶಿಸಲಾಗಿತ್ತು. ಮಂಗಳವಾರ ಇನ್ನೊಂದು ವಿಶ್ವವಿದ್ಯಾನಿಲಯವನ್ನು ಮುಚ್ಚುಗಡೆಗೊಳಿಸಲಾಗಿದೆ. ಪ್ರಾಂತದಲ್ಲಿನ ಒಟ್ಟಾರೆ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಆದೇಶದವರೆಗೆ ಈ ವಿವಿಗಳ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಈದುಲ್‌ಫಿತ್ರ್ ಹಬ್ಬದ ಆನಂತರವಷ್ಟೇ ವಿವಿ ಕ್ಯಾಂಪಸ್‌ಗಳನ್ನು ತೆರೆಯುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದೆಂದು ಅವರು ಹೇಳಿದರು.

ಕಳೆದ ವಾರ ನಡೆದ ರೈಲು ಹೈಜಾಕ್ ಪ್ರಕರಣ ಹಾಗೂ ಪ್ರತ್ಯೇಕವಾದಿ ಚಟುವಟಿಕೆಗಳ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕ್ವೆಟ್ಟಾದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ರಸ್ತೆಗಳಲ್ಲಿ ಭದ್ರತಾಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ ಹಾಗೂ ನಗರದ ವಿವಿಧೆಡೆ ಹೆಚ್ಚುವರಿ ತಪಾಸಣಾ ಠಾಣೆಗಳನ್ನು ಸ್ಥಾಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News