ಟೊರಂಟೊ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂಡೊ-ಕೆನಡಿಯನ್ ಸಿನೆಮಕ್ಕೆ ಗೌರವ

Update: 2024-09-06 17:41 GMT

ಟೊರಂಟೊ : ಭಾರತೀಯ ಕೆನಡಿಯನ್ ಸಮುದಾಯದ ಆಂತರಿಕ ಜೀವನವನ್ನು ದಾಖಲಿಸುವ ಪ್ರವರ್ತಕ ಚಲನಚಿತ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ `ಮಸಾಲಾ' ಸಿನೆಮಾಕ್ಕೆ ಟೊರಂಟೊ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನೆಮ ಎಂಬ ಗೌರವ ಲಭಿಸಿದೆ.

1991ರಲ್ಲಿ ಪ್ರಥಮ ಬಾರಿಗೆ ಬಿಡುಗಡೆಗೊಂಡ ಈ ಸಿನೆಮಾ ಚೆನ್ನೈ ಮೂಲದ, ಟೊರಂಟೊದಲ್ಲಿ ನೆಲೆಸಿರುವ ಸಿನೆಮಾ ನಿರ್ಮಾಪಕ ಶ್ರೀನಿವಾಸ ಕೃಷ್ಣ ನಿರ್ದೇಶನದ ಪ್ರಥಮ ಸಿನೆಮಾ ಆಗಿದೆ. ಹಾಸ್ಯಮಯ ಸಾಮಾಜಿಕ ಕಥಾವಸ್ತು ಒಳಗೊಂಡಿರುವ ಮಸಾಲಾ ಸಿನೆಮಾ ಬಾಂಬ್ ದಾಳಿಗೆ ವಿಮಾನ ತುತ್ತಾದ ಬಳಿಕ ಅನಾಥನಾದ ಬಾಲಕನ ಕಥೆಯ ಜತೆಗೆ, ವರ್ಣಭೇದ ನೀತಿ, ಮಾದಕ ದ್ರವ್ಯ ಸೇವನೆ, ನಿಶ್ಚಯಿತ ವಿವಾಹ(ಅರೇಂಜ್ಡ್ ಮ್ಯಾರೇಜ್), ಕೌಟುಂಬಿಕ ತೊಂದರೆಯ ಬಗ್ಗೆ ಬೆಳಕು ಚೆಲ್ಲುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News